ವಾರಾಣಸಿ : 'ಓಎಲ್ಎಕ್ಸ್'ನಲ್ಲಿ ವಾರಣಾಸಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿ ಮಾರಾಟಕ್ಕಿದೆ ಎಂದ ನಾಲ್ವರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಕಿಡಿಗೇಡಿಗಳ ಈ ಕೃತ್ಯದ ಬಗ್ಗೆ ತಿಳಿಯುತ್ತಿದ್ದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಉತ್ತರ ಪ್ರದೇಶ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
''ಜವಾಹರ್ ನಗರದಲ್ಲಿರುವ ಪ್ರಧಾನಿಯವರ ಜನಸಂಪರ್ಕ ಕಾರ್ಯಾಲಯದ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಆರೋಪಿಯೊಬ್ಬ ಅದನ್ನು ಒಎಲ್ ಎಕ್ಸ್ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ್ದ.
ಈ ಕಚೇರಿ ಮಾರಾಟಕ್ಕಿದೆ ಎಂದೂ ಉಲ್ಲೇಖಿಸಿದ್ದ. ಈ ವಿಷಯ ಗುರುವಾರ ನಮ್ಮ ಗಮನಕ್ಕೆ ಬಂದಿತ್ತು. ಕೂಡಲೇ ಭೇಲುಪುರ್ ಠಾಣೆಯಲ್ಲಿಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು,'' ಎಂದು ವಾರಣಾಸಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಪಾಠಕ್ ತಿಳಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
PublicNext
19/12/2020 07:25 am