ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2 ವಿಡಿಯೋಗಳನ್ನು ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಯುವಕ

ನಂಗಲಿ(ಕೋಲಾರ ಜಿಲ್ಲೆ): ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಮಾಡಿಟ್ಟ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.

ಶಿವರಾಜ್(24) ಮೃತಪಟ್ಟವರು. ಈತ ನಂಗಲಿಯ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದ ಹಳೆಕುಪ್ಪದಲ್ಲಿ ವಾಸವಾಗಿದ್ದರು. ಸಾಯುವುದಕ್ಕೂ ಮೊದಲು ಎರಡು ವಿಡಿಯೊ ಮಾಡಿದ್ದಾರೆ. ಒಂದು ವಿಡಿಯೊದಲ್ಲಿ ತಾನೊಬ್ಬ ಬಡವನಾಗಿದ್ದು ತನಗೆ ತಾಯಿ ಬಿಟ್ಟರೆ ಮತ್ತೆ ಯಾರೂ ದಿಕ್ಕಿಲ್ಲ ಎಂದು ಹೇಳುತ್ತಾರೆ. ಎರಡನೆಯ ವಿಡಿಯೊದಲ್ಲಿ ತಾನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆಕೆಯನ್ನು ಮದುವೆ ಮಾಡಿಕೊಳ್ಳಲು ಹುಡುಗಿಯ ತಂದೆಯನ್ನು ಕೇಳಿದಾಗ ಮದುವೆಗೆ ನಿರಾಕರಿಸಿದರು ಎಂದು ತಿಳಿಸಿದ್ದಾನೆ. ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Edited By : Nagaraj Tulugeri
PublicNext

PublicNext

18/12/2020 09:44 am

Cinque Terre

92.22 K

Cinque Terre

16

ಸಂಬಂಧಿತ ಸುದ್ದಿ