ಬೆಂಗಳೂರು: ಹೆಣ್ಣು ಮಕ್ಕಳಿಗೆ ರಾಜ್ಯದ ರಾಜಧಾನಿ ಸೇಫ್ ಅಲ್ವಾ ಎನ್ನುವ ಪ್ರಶ್ನೆ ಮತ್ತೊಮ್ಮೆ ಎದ್ದಿದೆ. ಕಾರಣ ಮಹಾನಗರದಲ್ಲಿ ಇಂತಹ ಪ್ರಕರಣಗಳು ಒಂದಾದ ಮೇಲೊಂದರಂತೆ ನಡೆಯುತ್ತಿವೆ.
ಈಗ ಮತ್ತೊಂದು ಅತ್ಯಾಚಾರ ಪ್ರಕರಣ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಮುಕ ಆರೋಪಿ ಮುಬಾರಕ್ (28) ಎಂಬಾತನೇ ಈ ಕೃತ್ಯ ಎಸಗಿದ್ದಾನೆ.
ಸಂತ್ರಸ್ತ ಯುವತಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಓದುತ್ತ, ಮದುವೆಗಳಲ್ಲಿ ಸ್ವಾಗತಕಾರ್ತಿಯಾಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಳು. ವಿವಾಹವೊಂದರಲ್ಲಿ ಪಾಲ್ಗೊಂಡಿದ್ದ ಯುವತಿ ಕಾರ್ಯಕ್ರಮ ಮುಗಿಯಲು ತಡವಾದ ಕಾರಣ, ಮದುವೆ ಛತ್ರದಲ್ಲಿ ರಾತ್ರಿ ಉಳಿದುಕೊಂಡಿದ್ದಾಳೆ. ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಥಣಿಸಂದ್ರ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಳೆ. ಅಲ್ಲಿಗೆ ಬಂದ ಆಟೋ ಚಾಲಕ ಮುಬಾರಕ್ ಎಲ್ಲಿಗೆ ಅಂತ ಕೇಳಿದ್ದಾನೆ. ಆಗ ನಾಗವಾರ ಕಡೆ ಹೋಗಬೇಕು ಅಂತಾ ಯುವತಿ ಹೇಳಿದ್ದಾಳೆ. ನಾನೂ ಅಲ್ಲಿಗೆ ಹೋಗ್ತಿರೋದು ಬನ್ನಿ ಅಂತ ಯುವತಿಯನ್ನು ಆಟೋದಲ್ಲಿ ಹತ್ತಿಸಿಕೊಂಡ ಮುಬಾರಕ್ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.
ನಂತರ ಯುವತಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲಿಂದ ಸುಧಾರಿಸಿಕೊಂಡು ಹತ್ತಿರದ ಮುಖ್ಯರಸ್ತೆಗೆ ಬಂದ ಯುವತಿ ಬೈಕಿನಲ್ಲಿ ತೆರಳುತ್ತಿದ್ದವರ ಸಹಾಯದಿಂದ ಮನೆ ತಲುಪಿದ್ದಾಳೆ. ನಂತರ ಪೊಲೀಸ್ ಠಾಣೆಗೆ ತೆರಳಿದ ಯುವತಿ ಆಟೋ ನೋಂದಣಿ ಸಂಖ್ಯೆ ಸಮೇತ ದೂರು ನೀಡಿದ್ದಾಳೆ. ಫೀಲ್ಡಿಗಿಳಿದ ಪೊಲೀಸರು ವಿಕೃತ ಕಾಮಿ ಮುಬಾರಕ್ ನನ್ನು ಅರೆಸ್ಟ್ ಮಾಡಿದ್ದಾರೆ.
PublicNext
18/12/2020 09:11 am