ಬೆಂಗಳೂರು: ಸ್ಕಿಮ್ಮಿಂಗ್ ಯಂತ್ರ ಬಳಸಿ ಎಟಿಎಂ ದೋಚಲು ಹೊಂಚು ಹಾಕಿದ್ದ ವಿದೇಶಿ ಮೂಲದ ಖದೀಮನನ್ನು ಸ್ಥಳಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಉಪ್ಪಾರಪೇಟೆ ಬಳಿ ಈ ಘಟನೆ ನಡೆದಿದೆ. ಕೊಲಂಬಿಯಾ ದೇಶದ ಕ್ರಿಸ್ಟಿನೊ ನವೊರ ಎಂಬ ವಿದೇಶಿ ಪ್ರಜೆಯನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಐಡಿಬಿಐ ಬ್ಯಾಂಕ್ನ ಎಟಿಎಂ ಮುಂದೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನ ವರ್ತನೆ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈತನನ್ನು ಬಂಧಿಸಿ ಪರಿಶೀಲಿಸಿದ ವೇಳೆ ಪೊಲೀಸರಿಗೆ ಸ್ಕಿಮ್ಮಿಂಗ್ ಯಂತ್ರ ಪತ್ತೆಯಾಗಿದೆ.
ಬೆಂಗಳೂರಿನ ಉತ್ತರ ವಿಭಾಗ ಹಾಗೂ ಶಿವಾಜಿನಗರ ವ್ಯಾಪ್ತಿಯಲ್ಲಿ ಇದೇ ರೀತಿ ಸ್ಕಿಮ್ಮಿಂಗ್ ಯಂತ್ರ ಬಳಸಿ ಎಟಿಎಂ ದರೋಡೆ ನಡೆದಿತ್ತು. ಸದ್ಯ ವಶದಲ್ಲಿರುವ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
PublicNext
18/12/2020 07:44 am