ಯಾವತ್ತೋ ಒಂದಿನ ನೀವೂ ಕೂಡ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಾಕಿಕೊಂಡಿರ್ತೀರಿ. ಅವರು ಕೇಳುವ ಹತ್ತಾರು ಪ್ರಶ್ನೆಗಳಿಗೆ ಬೇಸತ್ತು ಇದೊಳ್ಳೆ ಪೀಕಲಾಟ ಆಯ್ತಲ್ಲಪ್ಪ ಅನಕೊಂಡಿರ್ತೀರಿ. ಇದರ ನಡುವೆ ಕೆಲವೊಂದಿಷ್ಟು ಪೊಲೀಸರು ಸೈಡಿಗೆ ಕರೆದು ರಸೀದಿ ಆದ್ರೆ ಇಷ್ಟು, ನಾವು ನಾವೇ ಮಾತಾಡ್ಕೊಳ್ಳೋದಾದ್ರೆ ಇಷ್ಟು ಅಂದಿರ್ತಾರೆ. ಅಂತಹ ಅನುಭವ ನಿಮಗೂ ಆಗಿರುತ್ತೆ.
ಇಂತದ್ದಕ್ಕೆ ಫ್ರೆಶ್ಶಾಗಿರೋ ಎಕ್ಸಾಂಪಲ್ ಇಲ್ಲಿದೆ ನೋಡಿ. ಭ್ರಷ್ಟರಾದ ಕೆಲವೇ ಕೆಲವು ಪೊಲೀಸ್ ಪೇದೆಗಳು ಕೈಯಿಂದ ಲಂಚವನ್ನ ಮುಟ್ಟೋದೇ ಇಲ್ಲ. ಅವರು ಅದಕ್ಕಾಗಿ ಬೇರೆ ದಾರಿ ಕಂಡುಕೊಂಡಿರ್ತಾರೆ.
ಆದ್ರೆ ಇಲ್ನೋಡ್ರಪ್ಪ.. ಸಂಚಾರಿ ವಿಭಾಗದ ಮಹಿಳಾ ಪೇದೆಯೊಬ್ಬರು ಇನ್ನೊಬ್ಬ ಮಹಿಳೆಯಿಂದ ಕೈ ಸನ್ನೆ ಮಾಡಿ ಪ್ಯಾಂಟಿನ ಹಿಂಬದಿಯಲ್ಲಿ ಲಂಚ ಇಡುವಂತೆ ಹೇಳಿದ್ದಾಳೆ. ಅದರಂತೆ ಹಿಂಬದಿ ಜೇಬಿನಲ್ಲಿ ಲಂಚದ ನೋಟು ಇಟ್ಟ ಆ ಮಹಿಳೆ ಇಲ್ಲಿಂದ ಮೊದ್ಲು ಕಳಚ್ಕೊಂಡ್ರೆ ಸಾಕಪ್ಪ ಅಂತ ಎಸ್ಕೇಪ್ ಆಗಿದ್ದಾಳೆ. ಈ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗಿದೆ. ಶಿಸ್ತುಬದ್ಧ ಪ್ರಾಮಾಣಿಕ ಪೊಲೀಸರ ನಡುವೆ ಇಂತವರೂ ಇದ್ದೇ ಇರ್ತಾರೆ. ಏನ್ ಮಾಡೋಕಾಗುತ್ತೆ?
PublicNext
17/12/2020 10:04 pm