ಬೆಂಗಳೂರು- ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅವರ ತಂದೆ ವೆಂಕಟೇಶ್ ಅವರು ಲಕ್ಷ್ಮೀ ಸ್ನೇಹಿತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಮಗಳ ಸ್ನೇಹಿತ ಗುತ್ತಿಗೆದಾರನಾದ ಮನೋಹರ್ ಎಂಬಾತ ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ. ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಾಗ ಲಕ್ಷ್ಮೀಯನ್ನು ಮನೋಹರ್ ಹಾಗೂ ಆತನ ಸ್ನೇಹಿತರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಮನೋಹರ್ ವೈದ್ಯರ ಬಳಿ ಇಲ್ಲ ಸಲ್ಲದ ಕತೆ ಕಟ್ಟಿ ಹೇಳಿದ್ದಾನೆ.
ಸಾಯುವ ಮುನ್ನ ನಡೆದ ಪಾರ್ಟಿಯಲ್ಲಿ ಮನೋಹರ್ ಕೂಡ ಇದ್ದ. ಅದೇ ಪಾರ್ಟಿಯಲ್ಲಿದ್ದ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಎಂದು ಕತೆ ಕಟ್ಟಲಾಗಿದೆ.
ನನ್ನ ಮಗಳು ಎಲ್ಲ ರೀತಿಯಲ್ಲೂ ಸ್ಥಿತಿವಂತಳಾಗಿದ್ದಳು. ಅವಳಿಗೆ ಯಾವುದೇ ಖಿನ್ನತೆ ಇರಲಿಲ್ಲ. ಹೀಗಾಗಿ ನನ್ನ ಮಗಳೇಕೆ ಆತ್ಮಹತ್ಯೆ ಮಾಡಿಕೊಳ್ತಾಳೆ ಎಂದು ಲಕ್ಷ್ಮೀ ಅವರ ತಂದೆ ಆರೋಪಿಸಿದ್ದಾರೆ.
PublicNext
17/12/2020 04:09 pm