ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೇಜ್ ತ್ರಿ ಪಾರ್ಟಿಗಳು ಸೇರಿದಂತೆ ಡ್ರಗ್ಸ್ ದಂಧೆಕೋರರಿಗೆ ಕೊಕೇನ್ ಸರಬರಾಜು ಮಾಡುತ್ತಿದ್ದ ಕಿಂಗ್ ಪಿನ್ ವಿದೇಶಿ ಆರೋಪಿಯೊಬ್ಬನನ್ನ ಸಿಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ.
ನೈಜೀರಿಯಾ ಮೂಲದ ಚಿಡಿಬೇರ್ ಅಂಬ್ರೋಸ್ ಎಂಬಾತನೇ ಬಂಧಿತ ಕಿಂಗ್ ಪಿನ್. ಕೆಲ ದಿನಗಳಿಂದ ನಿರಂತರವಾಗಿ ಡ್ರಗ್ಸ್ ಪ್ರಕರಣದಲ್ಲಿ ನೈಜೀರಿಯಾ ಮೂಲಕ ಪೆಡ್ಲರ್'ಗಳು ಸಿಸಿಬಿ ಗಾಳಕ್ಕೆ ಬಿದ್ದಿದ್ದರು. ಈ ಪೆಡ್ಲರ್'ಗಳ ವಿಚಾರಣೆಗೆ ನಡೆಸಿದ ಆಂಬ್ರೋಸ್ ಎಂಬಾತ ಕೊಕೇನ್ ಪೂರೈಸುತ್ತಿದ್ದ ಎಂಬ ಮಾಹಿತಿ ಬಾಯ್ಬಿಟ್ಟಿದ್ದಾರೆ.
5 ವರ್ಷಗಳ ವ್ಯವಹಾರಿಕ ವೀಸಾದ ಅಡಿಯಲ್ಲಿ ನಗರಕ್ಕೆ ಬಂದಿದ್ದ ಆಂಬ್ರೋಸ್, ಬಾಣಸವಾಡಿಯಲ್ಲಿ ನೆಲೆಸಿದ್ದ. ಅಂತರಾಷ್ಟ್ರೀಯ ಮಾದಕ ವಸ್ತು ಮಾರಾಟ ಜಾಲದೊಂದಿಗೆ ಈತ ನಂಟು ಹೊಂದಿದ್ದ. ಬೆಂಗಳೂರಿನಲ್ಲಿ ಪ್ರಮುಖ ಕೊಕೇನ್ ಪೂರೈಕೆದಾರನಾಗಿ ಕುಖ್ಯಾತಿ ಪಡೆದಿದ್ದ ಎಂಬ ಆರೋಪ ಕೇಳಿ ಬಂದಿದೆ.
PublicNext
16/12/2020 01:22 pm