ಬೆಂಗಳೂರು: ಜೊತೆಯಲ್ಲಿ ಡ್ರಿಂಕ್ ಪಾರ್ಟಿ ಮಾಡಿದ ನಂತರ ಮನೆಯಲ್ಲಿ ಮಲಗಿದ್ದ ಸ್ನೇಹಿತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಆರ್ ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಆರ್.ಆರ್.ನಗರ ಐಡಿಯಲ್ ಹೋಮ್ಸ್ ಪ್ರದೇಶದ ನಿವಾಸಿ ತುಷಾರ್ ಬಂಧಿತ ಆರೋಪಿ. ಕಿರುಕುಳಕ್ಕೆ ಒಳಗಾದ ೨೨ ವರ್ಷ ವಯಸ್ಸಿನ ಯುವತಿ ನೀಡಿದ ದೂರಿನ ಅನ್ವಯ ವಿದ್ಯಾರ್ಥಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ತುಷಾರ್ ಹಾಗೂ ಸಂತ್ರಸ್ತ ಯುವತಿ, ಇಬ್ಬರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳು. ತುಷಾರ್ ಫ್ಲ್ಯಾಟ್‌ನಲ್ಲಿ ನೆಲೆಸಿದ್ದು, ಸಂತ್ರಸ್ತೆ ಪೇಯಿಂಗ್ ಗೆಸ್ಟ್‌ನಲ್ಲಿ ವಾಸವಿದ್ದಾಳೆ. ಡಿ.9ರಂದು ಸಂತ್ರಸ್ತ ಯುವತಿ, ತುಷಾರ್ ಸೇರಿದಂತೆ ನಾಲ್ವರು ಸೇರಿ ಮದ್ಯಪಾನ ಪಾರ್ಟಿ ಮಾಡುವ ಪ್ಲಾನ್ ಮಾಡಿದ್ದರು. ಲ್ಯಾಬ್ ಕ್ಲಾಸ್ ಮುಗಿದ ಬಳಿಕ ಸಂಜೆ 7 ಗಂಟೆ ಸುಮಾರಿಗೆ ಸ್ನೇಹಿತನೊಬ್ಬನಿಗೆ ಕರೆ ಮಾಡಿದಾಗ, ಮದ್ಯ ತೆಗೆದುಕೊಂಡು ಐಡಿಯಲ್ ಹೋಮ್ಸ್ ಪ್ರದೇಶದಲ್ಲಿರುವ ತುಷಾರ್ ಫ್ಲ್ಯಾಟ್‌ಗೆ ಬರಲು ಹೇಳಿದ್ದ. ಪಾರ್ಟಿ ಮುಗಿದು ಕೋಣೆಯಲ್ಲಿ ಮಲಗಿದ್ದಾಗ ಆರೋಪಿ ತುಷಾರ್ ನನ್ನನ್ನು ಮುಟ್ಟಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
PublicNext
16/12/2020 07:27 am