ಚೆನ್ನೈ: ತಮಿಳು ಹಾಗೂ ಕನ್ನಡದ ಮುಂಚೂಣಿ ಧಾರಾವಾಹಿಗಳಲ್ಲಿ ಮಿಂಚಿದ್ದ ನಟಿ ಹಾಗೂ ವಿಡಿಯೊ ಜಾಕಿ ಚಿತ್ರಾ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಕೆಯ ಪತಿ ಹೇಮನಾಥ್ ನನ್ನು ಚೆನ್ನೈನ ನಜರತ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ ಚೆನ್ನೈನ ಹೋಟೆಲೊಂದರಲ್ಲಿ ವಿ.ಜೆ ಚಿತ್ರಾ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಕೈಗೆತ್ತಿಕೊಂಡು ಪೊಲೀಸರು ಒಂದು ವಾರ ಕಾಲ ನಿರಂತರ ತನಿಖೆ ನಡೆಸಿದ್ದಾರೆ. ಚಿತ್ರಾ ಸಾವಿಗೆ ಮಾನಸಿಕ ಒತ್ತಡವೇ ಕಾರಣವಾಯಿತಾ? ಎಂಬ ಅನುಮಾನಗಳು ಕಂಡಿವೆ. ತನ್ನ ತಾಯಿ ಹಾಗೂ ಮದುವೆಯಾಗಬೇಕಿದ್ದ ಹುಡುಗನಿಂದಾಗಿಯೇ ಚಿತ್ರಾ ಸಾವನ್ನಪ್ಪಿದರಾ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ತನಿಖೆ ಆರಂಭಿಸಿದ್ದರು. ಈ ವೇಳೆ ಮಹತ್ವದ ಅಂಶಗಳು ಬಯಲಾಗಿದೆ ಎನ್ನಲಾಗಿತ್ತು.
PublicNext
15/12/2020 02:10 pm