ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೂಜಾಟಕ್ಕೆ ಹೆಂಡತಿಯನ್ನೇ ಒತ್ತೆಯಾಗಿಟ್ಟ ಗಂಡ: ಮುಂದೇನಾಯ್ತು?

ಪಟನಾ: ಜೂಜಾಟದಲ್ಲಿ ಸೋತ ಗಂಡ ತನ್ನ ಹೆಂಡತಿಯನ್ನೇ ಪಣಕ್ಕಿಟ್ಟು ಮತ್ತೆ ಜೂಜಾಡಿದ್ದಾನೆ. ಕೊನೆಗೆ ಅದರಲ್ಲೂ ಸೋತಿದ್ದಾನೆ. ನಂತರ ಗೆದ್ದವನ ಜೊತೆ ಲೈಂಗಿಕ ಕ್ರಿಯೆ ಮಾಡಲು ಒಪ್ಪದ ಹೆಂಡತಿಯ ಮರ್ಮಾಂಗಕ್ಕೆ ಆಸಿಡ್ ಹಾಕಿದ್ದಾನೆ. ಈ ಅಮಾನುಷ ಘಟನೆ ಬಿಹಾರದ ಪಟನಾದಲ್ಲಿ ನಡೆದಿದೆ.

ಬಿಹಾರದ ಭಾಗಲ್ಪುರದ ಮೊಜಾ ಹಿದ್‌ಪುರ ಗ್ರಾಮದಲ್ಲಿ ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ಈಗ ಎಫ್‌ಐಆರ್‌ ದಾಖಲಿಸಿ, ಆರೋಪಿ ಪತಿ ಸೋನು ಎಂಬಾತನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇತರ ಜೂಜುಗಾರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ಸೋನು, ತನ್ನ ಸ್ನೇಹಿತರೊಂದಿಗೆ ಗ್ರಾಮದಲ್ಲಿ ಜೂಜಾಟಕ್ಕೆ ಇಳಿದಿದ್ದ ಎಂದು ಮೊಜಾಹಿದ್‌ಪುರ ಪೊಲೀಸ್‌ ಠಾಣಾಧಿಕಾರಿ ರಾಜೇಶ್‌ ಕುಮಾರ್‌ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

15/12/2020 07:49 am

Cinque Terre

95.43 K

Cinque Terre

2

ಸಂಬಂಧಿತ ಸುದ್ದಿ