ರಷ್ಯಾ ಮಹಿಳೆ ಮೇಲೆ ಕಂಟೋನ್ಮೆಂಟ್ ಪ್ರದೇಶದಲ್ಲಿ ಸೇನಾ ಅಧಿಕಾರಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಡಿಸೆಂಬರ್ 10ರಂದು ನಡೆದಿದೆ.
ಸದ್ಯ ಸಂತ್ರಸ್ತ ಮಹಿಳೆ ಪೊಲೀಸರ ಬಳಿ ಅಪರಾಧ ದಂಡ ಸಂಹಿತೆ ಕಾಯ್ದೆ 161ರ ಪ್ರಕಾರ ಹೇಳಿಕೆ ದಾಖಲಿಸಿರುವುದಾಗಿ ವರದಿ ತಿಳಿಸಿದೆ.
ಈ ಹಿಂದೆಯೂ ಆರೋಪಿ ಅಧಿಕಾರಿ ರಷ್ಯಾ ಮಹಿಳೆಗೆ ಕಿರುಕುಳ ನೀಡಲು ಪ್ರಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.
ಕಾನ್ಪುರ್ ಎಎಸ್ ಪಿ ನಿಖಿಲ್ ಪಾಠಕ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದು, ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಧಿಕಾರಿ ಕರ್ನಲ್ ನೀರಜ್ ಗೆಹ್ಲೋಟ್ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ 48 ಗಂಟೆಯಿಂದ ಆರೋಪಿ ಕರ್ನಲ್ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಕೂಡಾ ಸ್ವಿಚ್ ಆಫ್ ಆಗಿದೆ.
ಪೊಲೀಸ್ ತಂಡ ಮತ್ತು ಕಣ್ಗಾವಲು ಪಡೆ ಆರೋಪಿಯ ಬಂಧನಕ್ಕೆ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ವರದಿ ವಿವರಿಸಿದೆ.
PublicNext
14/12/2020 07:34 pm