ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಯಿಗೆ ಹಗ್ಗ ಸುತ್ತಿ, ಕಾರಿಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಪಾಪಿ ಅರೆಸ್ಟ್

ಕೊಚ್ಚಿ: ನಾಯಿ ನಂಬಿಗಸ್ತ ಪ್ರಾಣಿ. ಮಾಲೀಕನಿಗೆ ಸದಾ ಒಳ್ಳೆಯದನ್ನೇ ಬಯಸುತ್ತದೆ. ಹೀಗಿದ್ದರೂ ಕೇರಳದ ವ್ಯಕ್ತಿಯೊಬ್ಬ ಶ್ವಾನದ ಕುತ್ತಿಗೆಗೆ ಹಗ್ಗ ಸುತ್ತಿ ನಂತರ ಅದನ್ನು ಕಾರಿಗೆ ಕಟ್ಟಿ ರಸ್ತೆಯಲ್ಲಿ ಧರಧರನೇ ಎಳೆದೊಯ್ದು ಅಮಾನವೀಯತೆ ಮೆರೆದಿದ್ದಾನೆ.

ನೆಡುಂಬಾಶೇರಿ ಅತ್ತಾಣಿ ಸಮೀಪದ ಚಾಲಾಕ ಎಂಬಲ್ಲಿ ಘಟನೆ ನಡೆದಿದೆ. ಕೃತ್ಯ ಎಸಗಿದ ಯೂಸುಫ್ ಎಂಬವವನ್ನು ಚೆಂಗಮನಾಡು ಪೊಲೀಸರು ಬಂಧಿಸಿದ್ದಾರೆ. ನಾಯಿಯ ಮೇಲೆ ಕ್ರೂರ ಪ್ರವೃತ್ತಿ ನಡೆಸಿದ ಯೂಸುಫ್ ದೃಶ್ಯವನ್ನು ಅಖಿಲ್ ಎಂಬವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಘಟನೆಯ ಬಗ್ಗೆ ತಪ್ಪೊಪ್ಪಿಕೊಂಡಿರುವ ಆರೋಪಿ ಯೂಸುಫ್, ''ನಾನು ಶ್ವಾನವನ್ನು ಪ್ರೀತಿಯಿಂದ ಸಾಕಿದ್ದೆ. ಆದರೆ ಇದಕ್ಕೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಅದನ್ನು ಬೇರೆಡೆ ಸಾಗಿಸಲೆಂದು ಕಾರೊಳಗಡೆ ಹತ್ತಿಸಲು ಪ್ರಯತ್ನಿಸಿದೆ. ನಾಯಿ ಕಾರಿನಲ್ಲಿ ಹತ್ತದಿದ್ದಾಗ ಅದರ ಕುತ್ತಿಗೆಗೆ ಹಗ್ಗದಿಂದ ಕಟ್ಟಿ ಏಳೆದೊಯ್ದೆ'' ಎಂದು ಸ್ಪಷ್ಟನೆ ನೀಡಿದ್ದಾರೆ.

Edited By : Vijay Kumar
PublicNext

PublicNext

12/12/2020 03:30 pm

Cinque Terre

188.76 K

Cinque Terre

31