ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳ್ಳರ ಕೈ ಚಳಕ : ಕೃತ್ಯ ಪೂರ್ತಿ ಸಿಸಿಟಿವಿಯಲ್ಲಿ ಸೆರೆ

ವಿಜಯಪುರ: ಇತ್ತೀಚಿನ ದಿನಮಾನಗಳಲ್ಲಿ ಕಳ್ಳತನ ಎನ್ನುವುದು ಸಾಮಾನ್ಯವಾಗಿದೆ.

ಎಲ್ಲಿ ನೋಡಿದರಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಸದ್ಯ ಬುಧವಾರ ತಡರಾತ್ರಿಯಲ್ಲಿ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಸರಣಿ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಖತರ್ನಾಕ್ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಂಧಗಿ ಪಟ್ಟಣದ ಸಂಗೀತಾ ಮೊಬೈಲ್ ಶೋರೂಂನಲ್ಲಿ ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಗಳನ್ನು ದೋಚಿದ್ದಾರೆ.

ಅಲ್ಲದೆ ಸಿದ್ದೇಶ್ವರ ಸೂಪರ್ ಬಾಜಾರ್, ಪೂಜಾರಿ ಟೈರ್ ರಿಮೊಡಿಂಗ್ ಶಾಫ್ ಹಾಗೂ ಸ್ಪೂರ್ತಿ ವೈನ್ ಶಾಫ್ ಗಳಲ್ಲಿಯೂ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ಇನ್ನು ಈ ಕೃತ್ಯದ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಸಿಂಧಗಿ ಪೊಲೀಸ್ ಠಾಣೆಯಲ್ಲಿ ಈ ಕಳ್ಳತನ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

10/12/2020 02:16 pm

Cinque Terre

46.16 K

Cinque Terre

0

ಸಂಬಂಧಿತ ಸುದ್ದಿ