ತೆಲಂಗಾಣ: ಕಲವರ ಬದುಕು ಹೇಗಿರತ್ತೆ ಅಂದ್ರೆ ಕತ್ತಲಲ್ಲಿ ಸೂಜಿ ಹುಡಿಕಿದಂತೆ.
ಕೆಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳದೆ ಸಾವೇ ಸಲ್ಯೂಶನ್ ಎನ್ನುವವರು ಇನ್ನು ನಮ್ಮಗಳ ಮಧ್ಯೆಯೇ ಇದ್ದಾರೆ.
ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರುತ್ತಾನೆಯೇ? ಎಂಬ ಸುಪ್ರಸಿದ್ಧ ಗಾದೆ ಮಾತಿದೆ. ಆದರೆ ಕೆಲವೊಮ್ಮೆ ನಮ್ಮ ಪರಿಸ್ಥಿತಿಯನ್ನಾ ದೇವರಿಗೂ ತಿಳಿಸಲು ಸಾಧ್ಯವಾಗಲ್ಲ.
ಇಲ್ಲೂ ಕೂಡ ಅದೇ ರೀತಿಯಾಗಿದೆ. ಹೆತ್ತ ತಾಯಿ ಮಕ್ಕಳಿಗೆ ಧೈರ್ಯ ಹೇಳುವ ಬದಲು ತನ್ನ ಕರಳು ಕುಡಿಗಳಿಗೆ ಸಾವಿನ ದಾರಿ ತೋರಿಸಿ ತಾನೂ ಬದುಕಿನ ಪಯಣ ಮುಗಿಸಿದ ಕರುಣಾಜನಕ ಘಟನೆ ತೆಲಂಗಾಣದ ಖಮ್ಮಂನಲ್ಲಿ ನಡೆದಿದೆ.
ತಾಯಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೋವಿಂದಮ್ಮ(48) ಮಕ್ಕಳಾದ ರಾಧಿಕಾ(30) ಮತ್ತು ರಮ್ಯ(28) ಆತ್ಮಹತ್ಯೆ ಮಾಡಿಕೊಂಡವರು.
ಇವರ ಈ ಸಾವಿಗೆ ಆರ್ಥಿಕ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ.
ಜನವರಿಯಲ್ಲಿ ಹಿರಿಯ ಮಗಳು ರಾಧಿಕಾಳ ಮದುವೆ ಫಿಕ್ಸ್ ಆಗಿತ್ತು. ಆದರೆ ಕೊರೊನಾ ಎಫೆಕ್ಟ್ ನಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಕುಟುಂಬಕ್ಕೆ ಮದುವೆ ಮಾಡುವ ಶಕ್ತಿ ಇರಲಿಲ್ಲವಂತೆ.
ಈ ಹಿನ್ನೆಲೆಯಲ್ಲಿ ಕ್ರಿಮಿನಾಶಕ ಸೇವಿಸಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
PublicNext
10/12/2020 10:42 am