ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಲ್ಲದಲ್ಲೂ ಗೋಲ್ ಮಾಲ್ ಸಕ್ಕರೆ ನಾಡಲ್ಲಿ ನಕಲಿ ಬೆಲ್ಲದ ಹಾವಳಿ

ಮಂಡ್ಯ: ಕಲಬೆರಕೆ ಇಲ್ಲದ ಪದಾರ್ಥ ಸಿಗುವುದೇ ಡೌಟ್ ಪರಿಶುದ್ಧ ಪದಾರ್ಥ ಹುಡುಕುವುದೇ ಒಂದು ಸರ್ಕಸ್ ಆಗಿದೆ.

ಆದರೆ ಕೆಲವು ಪದಾರ್ಥಗಳೂ ಎಂದಿಗೂ ಕಲಬೆರಕೆಯಾಗಲಾರದು ಎನ್ನುವಂತಹ ಪದಾರ್ಥಗಳು ಇಂದು ನಕಲಿ ಎನ್ನುವ ಸಂಗತಿ ನಿಜಕ್ಕೂ ಶಾಕ್ ನೀಡುತ್ತಿದೆ.

ಹೌದು ಸಕ್ಕರೆ ನಾಡು ಮಂಡ್ಯ ಅಂದರೆ ಇಡೀ ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಾದ್ಯಂತ ಇಲ್ಲಿಯ ಬೆಲ್ಲ ಫೇಮಸ್.

ಇಲ್ಲಿನ ಆಲೆಮನೆಗಳಲ್ಲಿ ಮಾಡುವ ರಾಸಾಯನಿಕ ರಹಿತ ಬೆಲ್ಲಕ್ಕೆ ಮರುಳಾಗದವರಿಲ್ಲ.

ಮಂಡ್ಯಕ್ಕೆ ಉತ್ತರ ಭಾರತದಿಂದ ಬಂದಿರುವ ಆಲೆಮನೆಯ ಕೆಲಸಗಾರರು ಹಾಗೂ ಮಾಲೀಕರಿಂದ ಮಂಡ್ಯ ಜಿಲ್ಲೆಯ ಬೆಲ್ಲದ ಗುಣಮಟ್ಟ ಕೆಡುವುದರ ಜೊತೆಗೆ ಈ ಜಿಲ್ಲೆಯ ಬೆಲ್ಲದ ವರ್ಚಸ್ಸು ಕೂಡ ಕಡಿಮೆಯಾಗುತ್ತಿದೆ.

ಮಂಡ್ಯ ಬೆಲ್ಲ ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಳ್ಳುತ್ತಿದೆ.

ಉತ್ತರ ಭಾರತದಿಂದ ಬಂದಿರುವ ಆಲೆಮನೆಯ ಮಾಲೀಕರು ಹಾಗೂ ಕೆಲಸಗಾರರು ಪಾಂಡವಪುರದಲ್ಲಿ ಅತೀ ಹೆಚ್ಚು ಆಲೆಮನೆಗಳಲ್ಲಿ ರಾಸಾಯನಿಕ ಬಳಸಿ ಬೆಲ್ಲವನ್ನು ತಯಾರು ಮಾಡುತ್ತಿದ್ದಾರೆ.

ಬಣ್ಣ ಬರುವ ಉದ್ದೇಶದಿಂದ ಜೀವಕ್ಕೆ ಹಾನಿಕಾರವಾಗಿರುವ ರಾಸಾಯನಿಕ ಕೆಳಮಟ್ಟದ ಸಕ್ಕರೆಯನ್ನು ಬೆಲ್ಲ ತಯಾರಿಕೆ ವೇಳೆ ಬಳಸಲಾಗುತ್ತಿದೆ.

ಇದರಿಂದ ಅಧಿಕ ಲಾಭಗಳಿಸಬಹುದು ಎಂದು ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದಾರೆ.

ಈ ರೀತಿ ಕೆಮಿಕಲ್ ಬೆಲ್ಲವನ್ನು ಸೇವನೆ ಮಾಡಿದರೆ ಬೋನ್ ಕ್ಯಾನ್ಸರ್ ಅಂತಹ ರೋಗಗಳು ಬರುವ ಸಾಧ್ಯತೆಗಳಿವೆ.

ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕೆಂದು ಮಂಡ್ಯ ಜಿಲ್ಲೆಯ ಮೂಲ ಆಲೆಮನೆ ಮಾಲೀಕರು ಒತ್ತಾಯ ಮಾಡುತ್ತಿದ್ದಾರೆ.

ಜಿಲ್ಲಾಧಿಕಾರಿಗಳು ಮಾತ್ರ ಈ ಬಗ್ಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಆಹಾರ ಇಲಾಖೆಯ ನಿರ್ದೇಶಕರಿಗೆ ವರದಿ ನೀಡಲು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

10/12/2020 09:51 am

Cinque Terre

91.93 K

Cinque Terre

7

ಸಂಬಂಧಿತ ಸುದ್ದಿ