ಚೆನ್ನೈ: ಕಾಲಿವುಡ್ ಹೆಸರಾಂತ ಸ್ಟಾರ್ ನಟಿ ಹಾಗೂ ವಿಡಿಯೋ ಜಾಕಿ ಚೈತ್ರಾ ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿಯಷ್ಟೇ ಶೂಟಿಂಗ್ ಮುಗಿಸಿಕೊಂಡು ಚೆನ್ನೈ ನಗರದ ಹೊಟೇಲೊಂದರ ಕೋಣೆಯಲ್ಲಿ ಮಲಗಿದ್ದ ಅವರು ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ತಮಿಳಿನ ಪಾಂಡಿಯನ್ ಸ್ಟೋರ್ಸ್ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ನಟಿಯ ಈ ನಿಗೂಢ ಸಾವು ಅವರ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ. ಚೆನ್ನೈ ನಗರದ ನಜರತ್ ಪೇಟೆಯ ಹೋಟೇಲ್ ನಲ್ಲಿ ಚೈತ್ರಾ ಮೃತದೇಹ ಪತ್ತೆಯಾಗಿದೆ.
ಕೇವಲ 29 ವರ್ಷ ವಯಸ್ಸಿನ ನಟಿ ಚೈತ್ರಾ ಶೂಟಿಂಗ್ ಮುಗಿಸಿಕೊಂಡು ಮಂಗಳವಾರ ತಡರಾತ್ರಿ 1 ಗಂಟೆಗೆ ಹೋಟೇಲ್ ಕೋಣೆಗೆ ಬಂದು ಮಲಗಿದ್ದರು. ಬುಧವಾರ ಬೆಳಗಿನ ಜಾವ 3.30ಕ್ಕೆ ಸ್ಥಳೀಯ ಠಾಣೆಗೆ ಹೊಟೇಲ್ ಸಿಬ್ಬಂದಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
09/12/2020 10:40 am