ರಾಯಚೂರು: ಮದುವೆಗೆ ಒಂದು ದಿನ ಬಾಕಿ ಇರುವಾಗಲೇ ಮದುಮಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ನಡೆದಿದೆ.
ಹುಲುಗಪ್ಪ (36) ಮೃತ ದುರ್ದೈವಿ ವರ. ಇಂದು ಮದುವೆಯಾಗಬೇಕಾಗಿದ್ದ ಹುಲುಗಪ್ಪ ಶನಿವಾರ ಸಂಜೆ ಸಾವನ್ನಪ್ಪಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ಸೂತಕ ಮನೆ ಮಾಡಿದೆ. ಮೃತ ಹುಲುಗಪ್ಪ ರಾಮತ್ನಾಳ ಗ್ರಾಮ ಪಂಚಾಯತಿಯಲ್ಲಿ ಸೆಕೆಂಡ್ ಡಿವಿಜನ್ ಅಸಿಸ್ಟೆಂಟ್(ಎಸ್‍ಡಿಎ) ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
PublicNext
06/12/2020 11:48 am