ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೌಕರಿ ಬಂದ ಮೇಲೆ ಲವರ್ ಗೆ ಕೈಕೊಟ್ಟ ಪೊಲೀಸ್: ಪ್ರಿಯತಮೆ ಆತ್ಮಹತ್ಯೆ

ಚಾಮರಾಜನಗರ: ಪ್ರೀತಿ ಮಾಡಿದ್ದ ತನ್ನ ಹುಡುಗ ನೌಕರಿ ಬಂದ ಮೇಲೆ ಕೈಕೊಟ್ಟ ಎಂದು ಮನನೊಂದ ಯುವತಿ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರಿನ ಬೀಚಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಂದಿನಿ(19) ಎಂಬಾಕೆಯೇ ನೇಣಿಗೆ ಶರಣಾದ ಯುವತಿ. ನಂದಿನಿ ಅದೇ ಗ್ರಾಮದ ಯೋಗೇಶ್ ಎಂಬಾತನನ್ನ ಪ್ರೀತಿಸುತ್ತಿದ್ದಳು. ಪ್ರೇಮದ ವಿಚಾರ ಮನೆಯವರಿಗೆ ತಿಳಿದು ಮದುವೆಗೂ ಕೂಡ ಒಪ್ಪಿಕೊಂಡಿದ್ದರು.

ಕಳೆದ ಆರು ತಿಂಗಳ ಹಿಂದೆ ಎರಡೂ ಮನೆಯವರು ಕುಳಿತು ಮದುವೆ ಮಾತು ಕತೆಯನ್ನು ನಡೆಸಿದ್ದರು. ಆದರೆ ಈ ಮಧ್ಯೆ ಯೋಗೇಶ್ ಗೆ ಪೊಲೀಸ್ ಕೆಲಸ ಸಿಕ್ಕಿತ್ತು. ಕೆಲಸ ಸಿಗುತ್ತಿದಂತೆ ಯೋಗೇಶ್ ತನ್ನ ಟ್ರ್ಯಾಕ್ ಬದಲಿಸಿದ್ದಾನೆ. ನಂದಿನಿಯನ್ನು ಮದುವೆ ಯಾಗಲು ನಿರಾಕರಿಸಿದ್ದಾನೆ.

ಇದರಿಂದ ಮನನೊಂದ ನಂದಿನಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಆಕೆಯ ಪೋಷಕರು ಯಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Edited By : Nagaraj Tulugeri
PublicNext

PublicNext

04/12/2020 11:24 am

Cinque Terre

95.28 K

Cinque Terre

12

ಸಂಬಂಧಿತ ಸುದ್ದಿ