ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಲೀಕನ ಮನೆಗೆ ಕನ್ನ ಹಾಕಿದ್ದ ಖತರ್ನಾಕ್ ಕಳ್ಳ ಅಂದರ್

ಶಿವಮೊಗ್ಗ: ಕೆಲಸ ನೀಡಿದ್ದ ಮಾಲೀಕನ ಮನೆಗೆ ಕನ್ನ ಹಾಕಿದ್ದ ಖದೀಮನೋರ್ವನನ್ನು ಪೊಲೀಸರು ಕೋಟೆ ಠಾಣೆ ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಅಬ್ದುಲ್ ದಿಲಾವರ್ ಮಲ್ಲಿಕ್(31) ಬಂಧಿತ ಆರೋಪಿ. ನಗರದ ತಿರುಪಳಯ್ಯನಕೇರಿಯ ಬಂಗಾರದ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಬ್ದುಲ್ ದಿಲಾವರ್ ಮಲ್ಲಿಕ್‌ನನ್ನು ಅಂಗಡಿಯ ಮಾಲೀಕ ತಾನೇ ರೂಮ್ ಮಾಡಿಟ್ಟು ಊಟವನ್ನು ನೀಡುತ್ತಿದ್ದ. ಇಂತಹ ಮಾಲೀಕನ ಮನೆಗೆ ಕನ್ನ ಹಾಕಿದ್ದ ಅಬ್ದುಲ್ ಮಲ್ಲಿಕ್, 72 ಗ್ರಾಂ ತೂಕದ 3.40 ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ.

ಈ ಕುರಿತು ಕೋಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ಸ್ವೀಕರಿಸಿದ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿ ಆರೋಪಿ ಅಬ್ದುಲ್ ಮಲ್ಲಿಕ್‌ನನ್ನು ಬಂಧಿಸಿ, ಅವನಿಂದ 3.40 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟೆ ಪಿಎಸ್‌ಐ ಶಿವಾನಂದ ಕೋಳಿ, ಅಶೋಕ್, ಕಲ್ಲನಗೌಡ, ಅಂಡ್ರೋನ್ ಜೋನ್ಸ್ ಅವರ ತಂಡಕ್ಕೆ ಎಸ್ಪಿಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.

Edited By : Vijay Kumar
PublicNext

PublicNext

01/12/2020 10:14 pm

Cinque Terre

51.91 K

Cinque Terre

4

ಸಂಬಂಧಿತ ಸುದ್ದಿ