ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಯಕ ವಾಜಿದ್ ಖಾನ್​ ಪತ್ನಿ ಬಿಚ್ಚಿಟ್ಟ ಮತಾಂತರ ಕರಾಳ ಅನುಭವ

ಮುಂಬೈ: ಉತ್ತರ ಪ್ರದೇಶ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಈ ಮಧ್ಯೆ ಬಾಲಿವುಡ್‌ನ‌ ಖ್ಯಾತ ಸಂಗೀತ ಸಂಯೋಜಕ, ಗಾಯಕ ವಾಜಿದ್ ಖಾನ್‌ ಅವರ ಪತ್ನಿ ಕಮಲ್​ರುಖ್​ ಖಾನ್​ ತಮಗಾಗಿದ್ದ ಭಯಾನಕ ಕಿರುಕುಳದ ಕುರಿತು ಬಹಿರಂಗಪಡಿಸಿದ್ದಾರೆ.

“ಮತಾಂತರ ವಿರೋಧಿ ಮಸೂದೆ’ ಎಂಬ ಹ್ಯಾಷ್​ಟ್ಯಾಗ್‌ನೊಂದಿಗೆ ತಮ್ಮ ಕರಾಳ ದಿನಗಳನ್ನ ನೆನೆಸಿರುವ ಕಮಲ್್ರುಖ್ ಖಾನ್, 'ನಾನು ಮೂಲತಃ ಪಾರ್ಸಿ ಜನಾಂಗದವಳು. ವಾಜಿದ್ ಅವರನ್ನು ಸುಮಾರು 10 ವರ್ಷ ಪ್ರೀತಿಸಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದೆ. ಆದರೆ ಅವರ ತಾಯಿ ಮತ್ತು ಕುಟುಂಬದ ಸದಸ್ಯರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಭಾರೀ ಒತ್ತಡ ಹೇರಿದ್ದರು. ನಾನು ಒಪ್ಪಿರಲಿಲ್ಲ, ವಾಜಿದ್​ ಕೂಡ ಮೌನವಾಗಿ ಉಳಿದಿದ್ದರು. ನಾನೆಷ್ಟೇ ಮತಾಂತರಕ್ಕೆ ವಿರೋಧಿಸಿದರೂ ದಿನದಿಂದ ದಿನಕ್ಕೆ ನನ್ನ ಮೇಲೆ ಕಿರುಕುಳ ಹೆಚ್ಚುತ್ತಲೇ ಹೋಯಿತೇ ವಿನಾ, ಕುಟುಂಬದಲ್ಲಿ ಯಾರೊಬ್ಬರೂ ನನ್ನ ಪರವಾಗಿ ನಿಲ್ಲಲಿಲ್ಲ' ಎಂದು ಹೇಳಿದ್ದಾರೆ.

‘ನಾನು ಮತಾಂತರಕ್ಕೆ ಒಪ್ಪದೆ ಇರುವುದು ಪತಿಯ ಮನೆಯಲ್ಲಿ ದೊಡ್ಡ ಸಮಸ್ಯೆಯೇ ಆಗಿಹೋಯಿತು. ಎಂದಿಗೂ ಎಲ್ಲಾ ಧರ್ಮದ ನಂಬಿಕೆಗಳನ್ನು ಗೌರವಿಸಿದ್ದೇನೆ ಮತ್ತು ಆಚರಿಸಿದ್ದೇನೆ. ಆದರೆ ಈ ಮತಾಂತರ ವಿಚಾರದಿಂದ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಮತಾಂತರದ ಕಿರುಕುಳ ಎಷ್ಟು ಭಯಾನಕ ರೂಪ ತಳೆದಿತ್ತು ಎಂದು ಬಣ್ಣಿಸುವುದೇ ಕಷ್ಟ. ಅಷ್ಟು ಕರಾಳ ದಿನಗಳನ್ನು ನಾನು ನೋಡಿದೆ' ಎಂದು ತಿಳಿಸಿದ್ದಾರೆ.

ಮತಾಂತರ ಕಿರುಕುಳ ತಾಳಲಾರದೆ ನಾನು ವಾಜಿದ್ ಜೊತೆಗಿನ ದಾಂಪತ್ಯ ಜೀವನದಿಂದಲೇ ಹೊರಬರಬೇಕಾಯಿತು. 10 ವರ್ಷಗಳ ನಮ್ಮ ಪ್ರೀತಿ ಈ ಮತಾಂತರವೆಂಬುದು ಹೊಸಕಿ ಹಾಕಿತ್ತು. ನಾನು, ನನ್ನ ಮಕ್ಕಳು ವಾಜಿದ್ ಖಾನ್‌ ಅವರನ್ನು ಈಗಲೂ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

30/11/2020 03:50 pm

Cinque Terre

95.5 K

Cinque Terre

9