ಲಕ್ನೋ: ವೃದ್ಧನೊಬ್ಬ ತನ್ನ ಸೊಸೆಯ ಮೇಲೆಯೇ ಅತ್ಯಾಚಾರ ಎಸಗಿದ ಅಮಾನವೀಯತೆ ಮರೆದಿದ್ದು, ಇದನ್ನು ಪ್ರಶ್ನಿಸಿದ ಮಗನನ್ನೇ ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ನಡೆದಿದೆ.
ಆರೋಪಿ ಮಜೋಲಾದ ಹನುಮಾನ್ ನಗರದ ನಿವಾಸಿಯಾಗಿದ್ದು, ಲೈಸೆನ್ಸ್ ಹೊಂದಿದ್ದ ರಿವಾಲ್ವರ್‌ನಿಂದ ಶೂಟ್ ಮಾಡಿ ಮಗನನ್ನು ಕೊಲೆ ಮಾಡಿದ್ದಾನೆ. ವೃದ್ಧನ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಕೊಲೆಯಾದ ಸಂತ್ರಸ್ತ ಕಳೆದ ವರ್ಷವಷ್ಟೇ ಮದುವೆಯಾಗಿದ್ದ. ಸಂತ್ರಸ್ತೆಯ ಪತಿ ಹಾಗೂ ಇತರ ಕುಟುಂಬಸ್ಥರು ನವೆಂಬರ್ 25ರಂದು ಬೇರೊಂದು ನಗರಕ್ಕೆ ವಿವಾಹ ಸಮಾರಂಭಕ್ಕೆ ತೆರಳಿದ್ದರು. ಈ ವೇಳೆ ಪಾಪಿ ಮಾವ ತನ್ನ ಸೊಸೆ ಮನೆಯಲ್ಲಿ ಒಬ್ಬಳೇ ಇದ್ದಾಗ ಅತ್ಯಾಚಾರ ಎಸಗಿದ್ದಾನೆ.
PublicNext
29/11/2020 08:53 pm