ರಾಯ್‍ಪುರ: ಛತ್ತಿಸ್‍ಗಡದಲ್ಲಿ ನಕ್ಸಲರು ಇಂದು ನಡೆಸಿದ ಐಇಡಿ (ಸುಧಾರಿತ ಸ್ಫೋಟಕ) ಸ್ಫೋಟದಲ್ಲಿ ಸಿಆರ್‌ಪಿಎಫ್ ಕೋಬ್ರಾ ಯುನಿಟ್‌ನ ಅಧಿಕಾರಿ ಹುತಾತ್ಮರಾಗಿದ್ದು, 10 ಜನ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುಕ್ಮಾ ಜಿಲ್ಲೆಯ ಚಿಂತಗುಫ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಾತ್ರಿ 8:30ರ ಸುಮಾರಿಗೆ ಅರವ್ರಾಜ್ ಮೆಟ್ಟಾ ಬೆಟ್ಟದಲ್ಲಿನ ಅರಣ್ಯ ಪ್ರದೇಶದಲ್ಲಿ ಐಇಡಿ ಸ್ಫೋಟವಾಗಿದೆ. ರಾಯ್‍ಪುರದಿಂದ 450 ಕಿ.ಮೀ.ದೂರದಲ್ಲಿ ನಕ್ಸಲರು ದಾಳಿ ನಡೆಸಿದ್ದಾರೆ. ಕೋಬ್ರಾದ 206ನೇ ಬೆಟಾಲಿಯನ್ ತಂಡ ಹಾಗೂ ಪೊಲೀಸರು ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಸ್ಫೋಟ ಸಂಭವಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಇನ್‍ಸ್ಪೆಕ್ಟರ್ ಜನರಲ್(ಬಸ್ತಾರ್ ರೇಂಜ್) ಪಿ.ಸುಂದರ್ ರಾಜ್, ಸಿಆರ್‌ಪಿಎಫ್‍ನ ಅಗ್ರ ಘಟಕದ 10 ಕಮಾಂಡೋಗಳು ಗಾಯಗೊಂಡಿದ್ದಾರೆ. ಅವರನ್ನು ರಾಯ್‍ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಿಸದೆ ಸಹಾಯಕ ಕಮಾಂಡರ್ ನಿತಿನ್.ಪಿ.ಭಲೇರಾವ್ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ.
PublicNext
29/11/2020 03:16 pm