ಕೊಪ್ಪಳ: ಪತಿಯೊಬ್ಬ ತವರು ಮನೆಯಿಂದ ಬಂದ ಪತ್ನಿಯನ್ನ ಮರುದಿನವೇ ಕೊಚ್ಚಿ ಕೊಲೆಗೈದ ಘಟನೆ ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದಲ್ಲಿ ನಡೆದಿದೆ.
ಮುರಡಿ ಗ್ರಾಮದ ಯಲ್ಲಪ್ಪ ಕೊಲೆಗೈದ ಪಾಪಿ ಪತಿ. ರೇಣುಕಾ (32) ಕೊಲೆಯಾದ ಪತ್ನಿ. ಕೆಲವು ತಿಂಗಳ ಹಿಂದೆ ಯಲ್ಲಪ್ಪ ದಂಪತಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ್ದರು. ಬಳಿಕ ಯಲ್ಲಪ್ಪನ ಕಿರಿಕಿರಿಗೆ ಬೇಸತ್ತ ರೇಣುಕಾ ತವರು ಮನೆ ಸೇರಿದ್ದಳು. ಶುಕ್ರವಾರವಷ್ಟೇ ಯಲ್ಲಪ್ಪನ ಅಣ್ಣ ಮಂಗಳಪ್ಪ, ಅತ್ತಿಗೆ ಹಾಗೂ ಇತರರು ಸೇರಿ ರೇಣುಕಾಳನ್ನು ತವರು ಮನೆಯಿಂದ ಕರೆ ತಂದಿದ್ದರು. ಬಳಿಕ ಇಬ್ಬರಿಗೂ ಬುದ್ಧಿವಾದ ಹೇಳಿ ಹೋಗಿದ್ದರು. ಆದರೆ ಇಂದು ಮತ್ತೆ ದಂಪತಿ ಮಧ್ಯೆ ಜಗಳ ಶುರುವಾಗಿದ್ದು, ಕೋಪಗೊಂಡ ಯಲ್ಲಪ್ಪ ಮಚ್ಚಿನಿಂದ ಪತ್ನಿ ರೇಣುಕಾಳನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಈ ಸಂಬಂಧ ಬೇವುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
28/11/2020 08:10 pm