ಹೈದರಾಬಾದ್: ತಾಯಿಯೊಬ್ಬಳು ಮಕ್ಕಳಿಬ್ಬರನ್ನ ನದಿಗೆ ತಳ್ಳಿದ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಮಹಬೂಬನಗರ ಜಿಲ್ಲೆಯ ಹಂವಾಡ ತಾಲೂಕಿನ ಹಸನಾಬಾದ್ ಗ್ರಾಮದಲ್ಲಿ ನಡೆದಿದೆ.
28 ವರ್ಷದ ಯಲ್ಲಮ್ಮ ಮಕ್ಕಳಿಬ್ಬರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ. ರಂಜಿತಾ (8) ಹಾಗೂ ರಾಜು (4) ಮೃತ ದುರ್ದೈವಿಗಳು. ಯಲ್ಲಮ್ಮ 10 ವರ್ಷಗಳ ಹಿಂದೆ ಸತ್ಯಪ್ಪ ಎಂಬಾತನ ಜೊತೆಗೆ ವಿವಾಹವಾಗಿದ್ದಳು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗೆ ಮೂರು ಮಕ್ಕಳಿದ್ದರು. ಆರ್ಥಿಕ ಸಂಕಷ್ಟ ಮತ್ತು ಪತಿ ಕುಟುಂಬಸ್ಥರ ಕಿರುಕುಳದಿಂದ ಬೇಸತ್ತ ಯಲ್ಲಮ್ಮ ಮೂರು ಮಕ್ಕಳ ಜೊತೆ ಮನೆಯಿಂದ ಹೊರ ಬಂದಿದ್ದಳು.
ಯಲ್ಲಮ್ಮ ಊರಿಗೆ ತೆರಳುವ ಮಾರ್ಗ ಮಧ್ಯೆ ರಂಜಿತಾ ಮತ್ತು ರಾಜುನನ್ನು ನದಿಗೆ ಎಸೆದಿದ್ದಾಳೆ. ಇದನ್ನ ಕಂಡ 6 ವರ್ಷದ ಅನಿತಾ ಅಮ್ಮನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾಳೆ. ಅನಿತಾ ಸಿಗದ ಹಿನ್ನೆಲೆ ಯಲ್ಲಮ್ಮ ಸಹ ನದಿಗೆ ಧುಮುಕಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನ ನದಿಯಿಂದ ಹೊರ ತೆಗೆದಿದ್ದಾರೆ.
PublicNext
28/11/2020 04:56 pm