ಮಂಗಳೂರು-ಫೇಸು ಬುಕ್ ಮೂಲಕ ಪರಿಚಯವಾದ ಹುಡುಗನನ್ನು ಪ್ರೀತಿಸಿ ಮತಾಂತರ ಹೊಂದಿ ಮದುವೆ ಆಗಿದ್ದ ಮಹಿಳೆಯೊಬ್ಬಳು ಎಲ್ಲೂ ನೆಲೆ ಸಿಗದೇ ಲಾಡ್ಜ್ ಪಾಲಾಗಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಇಬ್ರಾಹಿಂ ಖಲೀಲ್ ಎಂಬಾತನೊಂದಿಗೆ ಕೇರಳ ಕಣ್ಣೂರಿನ ವಿವಾಹತ ಮಹಿಳೆಗೂ ಫೇಸ್ ಬುಕ್ ಮೂಲಕ ಪರಿಚಯವಾಗಿದೆ. ಸ್ವಲ್ಪ ದಿನಗಳ ನಂತರ ಪ್ರೇಮಾಂಕುರವೂ ಆಗಿದೆ. ಆ ನಂತರ ಮದುವೆ ವಿಚಾರ ಬಂದಾಗ ನೀನು ಇಸ್ಲಾಮಿಗೆ ಮತಾಂತರವಾಗಬೇಕೆಂದು ಇಬ್ರಾಹಿಂ, ಶಾಂತಿ ಜೂಬಿಗೆ ಹೇಳಿದ್ದ ಎಂಬ ಆರೋಪ ಇದೆ.
ಅದರಂತೆ 2017ರಲ್ಲಿ ತನ್ನ ಮೊದಲ ಪತಿಯನ್ನು ಬಿಟ್ಟು ಬಂದ ಶಾಂತಿ ಜೂಬಿ ಇಬ್ರಾಹಿಂ ಖಲೀಲ್ ಜೊತೆ ನಿಖಾ ಆಗಿದ್ದಾಳೆ. ಮತಾಂತರಗೊಂಡ ಶಾಂತಿ ಜೂಬಿ, ಆಸಿಯಾ ಎಂದಾಗಿ ತನ್ನ ಹೆಸರು ಬದಲಾಯಿಸಿಕೊಂಡು ಬೆಂಗಳೂರಿನಲ್ಲೇ ವಾಸವಿದ್ದಳು. ಆರಂಭದಲ್ಲಿ ಎಲ್ಲವೂ ಚೆಂದ ಎನ್ನುವಂತೆ ಸಂಸಾರ ಸಾಗಿತ್ತು. ಆದ್ರೆ ಎಂಟು ತಿಂಗಳ ಹಿಂದೆ ಈಕೆಯ ಪತಿ ಖಲೀಲ್ ಎಸ್ಕೇಪ್ ಆಗಿದ್ದಾನೆ.
ಈಗ ಖಲೀಲ್ ಕುಟುಂಬಸ್ಥರು ತಮ್ಮ ಮಗನನ್ನು ಬಿಟ್ಟುಬಿಡುವಂತೆ ಆಸಿಯಾಗೆ ಬೆದರಿಕೆ ಹಾಕಿದ್ದಾರೆ. ಖಲೀಲ್ ಮೇಲೆ ನಂಬಿಕೆ ಇಟ್ಟ ಆಸಿಯಾ ತನ್ನ ಕೋಟ್ಯಾಂತರ ಬೆಲೆ ಬಾಳುವ ಮನೆ, ತವರಿನ ಆಸ್ತಿಯನ್ನು ಆತನಿಗೆ ಕೊಟ್ಟಿದ್ದಾಳೆ. ಸದ್ಯ ಮನೆಯವರು ಕೂಡ ಆಸಿಯಾಳನ್ನು ಹೊರಹಾಕಿದ್ದರಿಂದ ಆಸಿಯಾ ಹಲವಾರು ತಿಂಗಳಿಂದ ಸುಳ್ಯದ ಲಾಡ್ಜ್ ನಲ್ಲಿ ವಾಸವಿದ್ದಾರೆ.
ನ್ಯಾಯಕ್ಕಾಗಿ ಮುಸ್ಲಿಂ ಸಂಘಟನೆಗಳ ಮೊರೆ ಹೋದರೂ ಅವರು ಸ್ಪಂದಿಸುತ್ತಿಲ್ಲ. ಸದ್ಯ ಆಸಿಯಾ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದಾರೆ.
PublicNext
26/11/2020 11:36 am