ಜೈಪುರ: ಅಶ್ಲೀಲ ಸಿನೆಮಾ ನೋಡಿ ಗೆಳೆಯನ ತಾಯಿಯನ್ನ ಅತ್ಯಾಚಾರಗೈದಿರುವ ವಿಕೃತ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
21 ವರ್ಷದ ವಿಕಾಸ್ ಅಲಿಯಾಸ್ ನೇವಲಾ ಕಾಮುಕ ಯುವಕ. ರಾತ್ರಿ ಹೊತ್ತು ಅಂತರ್ಜಾಲ ತಾಣದಲ್ಲಿ ವಿಕಾಸ್ ಅಶ್ಲೀಲ ಸಿನೆಮಾ ನೋಡಿದ್ದಾನೆ. ಮನೆಯಲ್ಲಿ ಒಂಟಿಯಾಗಿದ್ದ ಗೆಳೆಯನ 60 ವರ್ಷದ ವಿಧವೆ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ವಿಕಾಸ್ ಮದ್ಯ ಸೇವನೆ ಮಾಡಿದ್ದ ಎಂದು ತಿಳಿದು ಬಂದಿದೆ. ಇಷ್ಟೆಲ್ಲ ಆದ ಮೇಲೆ ವೃದ್ಧೆಯ ಮೇಲೆ ಹಲ್ಲೆ ಮಾಡಿದ ಆತ ವಿಷಯ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ.
ನಂತರ ಮಹಿಳೆಯನ್ನ ಮನೆಯಲ್ಲಿ ಬಂಧಿಸಿ ಎಸ್ಕೇಪ್ ಆಗಿದ್ದಾನೆ. ಮಹಿಳೆ ಸಹಾಯಕ್ಕೆ ಕೂಗುತ್ತಿರುವ ಧ್ವನಿ ಕೇಳಿದ ನೆರೆಹೊರೆಯವರು ಬಾಗಿಲು ತೆರೆದಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನ ಬರ್ಡೋಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
PublicNext
26/11/2020 08:25 am