ನವದೆಹಲಿ: ಬುರ್ಖಾಧಾರಿ ಮಹಿಳೆಯೊಬ್ಬಳು ಅಸಭ್ಯವಾಗಿ ಬೈಯುತ್ತಾ ಪಿಸ್ತೂಲು ಹಿಡಿದು ಬೇಕಾಬಿಟ್ಟಿ ಗುಂಡು ಹಾರಿಸಿರುವ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ.
ಸಾರ್ಫಾ ಬಾದ್ ಪ್ರದೇಶದಲ್ಲಿ ನವೆಂಬರ್ 8ರಂದು ಘಟನೆ ನಡೆದಿದ್ದು, ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಓರ್ವ ಪುರುಷನ ಜೊತೆಗೆ ಬೈಕ್‌ನಲ್ಲಿ ಬಂದ ಬುರ್ಖಾ ತೊಟ್ಟ ಮಹಿಳೆಯೊಬ್ಬಳು ಒಂದು ಅಂಗಡಿಯ ಮುಂದೆ ನಿಂತು ಬಾಯಿಗೆ ಬಂದಂತೆ ಬೈಯುತ್ತಾಳೆ. ಅಷ್ಟೇ ಅಲ್ಲದೆ ಪಿಸ್ತೂಲು ಹಿಡಿದು ಬಾಗಿಲು ಮುಚ್ಚಿದ್ದ ಅಂಗಡಿಯ ಮೇಲೆ ಗುಂಡು ಹಾರಿಸುತ್ತಾಳೆ. ನಾನು ಗ್ಯಾಂಗ್ಸ್ಟರ್ನ ಸಹೋದರಿ ಎಂದು ಚೀರಾಡುತ್ತಾಳೆ. ಈ ವೇಳೆ ಮಹಿಳೆಯ ಜೊತೆಗಿದ್ದ ವ್ಯಕ್ತಿ ಸಮಾಧಾನ ಮಾಡಲು ಮುಂದಾಗುತ್ತಾನಾದರೂ ತಡೆಯದ ಮಹಿಳೆ ಗುಂಡನ್ನು ಹಾರಿಸಲಾರಂಭಿಸುತ್ತಾಳೆ. ಬಳಿಕ ಬೈಕ್ ಹತ್ತಿ ಅಲ್ಲಿಂದ ಹೊರಡುತ್ತಾಳೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮಹಿಳೆ ಗುಂಡು ಹಾರಿಸಿರಬಹುದು. ಆರೋಪಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
PublicNext
24/11/2020 06:51 pm