ಹಂಪಿ(ಬಳ್ಳಾರಿ ಜಿಲ್ಲೆ): ಮದುವೆಗೂ ಮುನ್ನ ವಿಡಿಯೋ ಶೂಟ್ ಮಾಡಿಸಿಕೊಳ್ಳೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಮದುವೆಯಾಗಲು ಹೊರಟಿರುವ ಜೋಡಿಯೊಂದು ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ವಿಡಿಯೊ ಶೂಟ್ ಮಾಡಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಹಂಪಿಯ ನಿರ್ಬಂಧಿತ ಪ್ರದೇಶಗಳಲ್ಲಿ ಈ ಜೋಡಿಯ ಪ್ರಿ ವೆಡ್ಡಿಂಗ್ ಶೂಟ್ ಮಾಡಲಾಗಿದೆ. ಹೀಗಾಗಿ ಅವರಿಗೆ ಅನುಮತಿ ಕೊಟ್ಟವರು ಯಾರು? ಅನುಮತಿ ನೀಡಿದ್ದೇಕೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕೇಳಿಬರುತ್ತಿದೆ.
ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಎಂದು ಆಂಧ್ರ ಮೂಲದ ಈ ಜೋಡಿ ಹಂಪಿಯ ನಿರ್ಬಂಧಿತ ಪ್ರದೇಶಗಳು, ಸ್ಮಾರಕಗಳ ಮೇಲೆ ಹತ್ತಿ ಫೋಟೋ, ವಿಡಿಯೊ ಮಾಡಿಸಿಕೊಂಡಿದ್ದಾರೆ. ಪುರಾತತ್ವ ಇಲಾಖೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಂಪಿಯ ವಿಜಯ ವಿಠ್ಠಲ ದೇವಸ್ಥಾನ, ಸಪ್ತಸ್ವರ ಮಂಟಪದಲ್ಲಿ ಯಾರಿಗೂ ಹೋಗಲು ಪ್ರವೇಶವಿಲ್ಲ. ಆದರೆ ಈ ಜೋಡಿ ಅಷ್ಟು ಸಲೀಸಾಗಿ ಹೋಗಿ ವಿಡಿಯೊ ಹೇಗೆ ಮಾಡಿಸಿಕೊಂಡರು, ಕೆಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮರಾ ನಿಷೇಧವಿದೆ, ಆದರೆ ಕಮಲ್ ಮಹಲ್ ಅನ್ನು ಡ್ರೋನ್ ಮೂಲಕ ಹೇಗೆ ಶೂಟ್ ಮಾಡಿಸಿಕೊಂಡರು ಎಂಬ ಪ್ರಶ್ನೆ, ಆಕ್ರೋಶ ಸಾರ್ವಜನಿಕ ವಲಯದಲ್ಲಿ ಉದ್ಭವವಾಗಿದೆ.
PublicNext
24/11/2020 09:00 am