ಹಾಸನ: ಮತ್ತೊಬ್ಬಳ ಜೊತೆ ಅಕ್ರಮ ಸಂಬಂಧಕ್ಕಾಗಿ ಪಾಪಿ ಪತಿಯೊಬ್ಬ ಪತ್ನಿಯನ್ನೇ ಕೊಲೆಗೈದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಜೊತೆಗೆ ಕೃತ್ಯಕ್ಕೆ ಸಹರಿಸಿದ್ದ ಆರೋಪಿ ಗೆಳತಿ ಹಾಗೂ ಮತ್ತೋರ್ವನನ್ನು ಬಂಧಿಸಲಾಗಿದೆ.
ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಬೆಲಗೂರಿನ ಸುಷ್ಮಿತ ಕೊಲೆಯಾದ ದುರ್ದೈವಿ. ನಾಗರಾಜ್ (28) ಹಾಗೂ ಶೈಲಾ (27) ಮತ್ತು ಮೋಹನ್ (24) ಬಂಧಿತ ಆರೋಪಿಗಳು. ನವೆಂಬರ್ 1ರಂದು ಸುಷ್ಮಿತಾಳ ಶವ ಹಾಸನದ ದುದ್ದ ಚೀರನಹಳ್ಳಿ ಕೆರೆಯಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಅಪರಿಚಿತ ಶವದ ಗುರುತು ಬೆನ್ನತ್ತಿದ ದುದ್ದ ಪೊಲೀಸರು ಪ್ರಕರಣವನ್ನ ಭೇದಿಸಿದ್ದಾರೆ.
PublicNext
23/11/2020 09:55 pm