ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇರುವೆ ಗೂಡು ಸುಡಲು ಹೋಗಿ ಹೊತ್ತಿ ಉರಿದು ಪ್ರಾಣಬಿಟ್ಟ ಮಹಿಳಾ ಟೆಕ್ಕಿ

ಚೆನ್ನೈ: ಇರುವೆ ಗೂಡು ಸುಡಲು ಹೋಗಿ ಮಹಿಳಾ ಟೆಕ್ಕಿಯೊಬ್ಬರು ಹೊತ್ತಿ ಉರಿದು ಪ್ರಾಣಬಿಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ.

27 ವರ್ಷದ ಚೆನ್ನೈ ಸಾಫ್ಟ್‌ವೇರ್ ಎಂಜಿನಿಯರ್ ಮೃತ ದುರ್ದೈವಿ. ಯುವತಿಯು ತನ್ನ ಮನೆಯಲ್ಲಿದ್ದ ಇರುವೆ ಗೂಡನ್ನು ಸುಡಲು ಮುಂದಾಗಿದ್ದರು. ಆದರೆ ಅವರು ಧರಿಸಿದ್ದ ಪಾಲಿಯೆಸ್ಟರ್ ಬಟ್ಟೆಗೆ ಬೆಂಕಿ ತಗುಲಿ ಶೇ.90 ಸುಟ್ಟಗಾಯಗಳಿಂದ ಬಳಲುತ್ತಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಯುವತಿಯು ಭಾನುವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈ ಘಟನೆಯಲ್ಲಿ ಯುವತಿಯ ತಾಯಿಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿವೆ. ಈ ಸಂಬಂಧ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಂಜಿನಿಯರ್ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Edited By : Vijay Kumar
PublicNext

PublicNext

23/11/2020 04:34 pm

Cinque Terre

54.98 K

Cinque Terre

1

ಸಂಬಂಧಿತ ಸುದ್ದಿ