ರಾಂಚಿ: ನಿರುದ್ಯೋಗಿ ಮಗನೊಬ್ಬ ಸರ್ಕಾರಿ ಉದ್ಯೋಗಕ್ಕಾಗಿ ತಂದೆಯನ್ನೇ ಕೊಲೆಗೈದ ಘಟನೆ ಜಾರ್ಖಂಡ್‌ನ ರಾಮಗಡದಲ್ಲಿ ನಡೆದಿದೆ.
ರಾಮಗಡದ ಜಿಲ್ಲೆಯ ಬಾರ್ಕಕಾನದ ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್‌ನಲ್ಲಿ (ಸಿಸಿಎಲ್) ಮುಖ್ಯ ಭದ್ರತಾ ಸಿಬ್ಬಂದಿ ಕೃಷ್ಣರಾಮ್ (55) ಕೊಲೆಯಾದ ತಂದೆ. ಅವರ ಹಿರಿಯ ಮಗ ಅನುಕಂಪದ ನೆಲೆಯಲ್ಲಿ ತಂದೆಯ ಉದ್ಯೋಗ ಪಡೆಯಲು ಕೃತ್ಯ ಎಸೆಗಿದ್ದಾನೆ.ಆರೋಪಿಯು ತಂದೆಯ ಗಂಟಲು ಕತ್ತರಿಸಿ ಹತ್ಯೆ ಮಾಡಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಉಪ ವಿಭಾಗದ ಪೊಲೀಸ್ ಅಧಿಕಾರಿ ಪ್ರಕಾಶ್ ಚಂದ್ರ ಮಹ್ತೊ ಮಾಹಿತಿ ನೀಡಿದ್ದಾರೆ.
PublicNext
22/11/2020 02:31 pm