ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯನ್ನ ಕೊಲೆಗೈದು ಶವದ ಮೇಲೆ ರೇಪ್- ವಿಕೃತ ಕಾಮುಕ ಅರೆಸ್ಟ್

ಚಿಕ್ಕಬಳ್ಳಾಪುರ: ಮಹಿಳೆಯನ್ನು ಕೊಲೆಗೈದು ಆಕೆಯ ಶವದ ಮೇಲೆ ಅತ್ಯಚಾರ ಎಸೆಗಿದ್ದ ವಿಕೃತ ಕಾಮುಕನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಎದ್ದುಲೋಳ್ಳಪಲ್ಲಿ ನಿವಾಸಿ ಕೆ.ಎನ್. ಶಂಕರಪ್ಪ ಬಂಧಿತ ಆರೋಪಿ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕೋನಾಪುರ ಗ್ರಾಮದ 27 ವರ್ಷದ ಗೃಹಿಣಿ ಕೊಲೆಯಾದ ಮಹಿಳೆ. ಇದೇ ಅಕ್ಟೋಬರ್ 19ರಂದು ಮಹಿಳೆ ತಮ್ಮ ಜಮೀನಿನಲ್ಲಿ ಕಡಲೆಕಾಯಿ ಬಿಡಿಸುತ್ತಿದ್ದರು. ಈ ವೇಳೆ ಕೆ.ಎನ್.ಶಂಕರಪ್ಪ ಜಮೀನಿನಲ್ಲಿದ್ದ ಒಂಟಿ ಮಹಿಳೆ ಬಳಿ ಬಂದು, ಪರಿಚಯದ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಗೃಹಿಣಿ ವಿರೋಧ ವ್ಯಕ್ತಪಡಿಸಿದ್ದ ಕಾರಣ ಆಕೆಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ. ನಂತರ ಶವದ ಮೇಲೆ ಅತ್ಯಾಚಾರವೆಸಗಿ ವಿಕೃತ ಕಾಮ ಮೆರೆದಿದ್ದ.

ಕೊಲೆ ನಡೆದು ಬರೋಬ್ಬರಿ ಒಂದು ತಿಂಗಳಲ್ಲಿ ಬಟ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿ ಶಂಕರಪ್ಪ ಈ ರೀತಿ ಬೇರೆ ಕಡೆಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನಾ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By : Vijay Kumar
PublicNext

PublicNext

22/11/2020 09:51 am

Cinque Terre

104.74 K

Cinque Terre

7

ಸಂಬಂಧಿತ ಸುದ್ದಿ