ದುಬೈ- ಬೇರೆ ಬೇರೆ ಕಾರಣಗಳಿಗಾಗಿ ದುಬೈ ರಾಜಮನೆತನ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ಈಗ ಅದು ಅನೈತಿಕ ಸಂಬಂಧಕ್ಕಾಗಿ ಸುದ್ದಿಯಾಗಿದೆ. ಅದು ಯಾರದ್ದೋ ಅನೈತಿಕ ಸಂಬಂಧ ಅಲ್ಲ. ಸ್ವತಃ ದುಬೈ ರಾಜಕುಮಾರಿಯದ್ದು!
ಹೌದು. ದುಬೈ ರಾಜಕುಮಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಆರನೇ ಪತ್ನಿ ಹಯಾ ಅವರಿಗೆ ತಮ್ಮದೇ ಬಾಡಿ ಗಾರ್ಡ್ ಜೊತೆಗೆ ಅನೈತಿಕ ಸಂಬಂಧ ಶುರುವಾಗಿದೆ. 2016ರಿಂದ ರಾಜಕುಮಾರಿ ಹಯಾ ಅವರು ತಮ್ಮ ಬಾಡಿಗಾರ್ಡ್ ರಸ್ಸೆಲ್ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದರು. ಸುಮಾರು 2 ವರ್ಷಗಳ ನಂತರ ಅವರು ದುಬೈನಿಂದ ಲಂಡನ್ ಗೆ ಆತನೊಂದಿಗೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ. ಈ ವಿಚಾರ ಪತಿಗೆ ತಿಳಿಯದಂತೆ ನೋಡಿಕೊಳ್ಳಲು ಹಯಾ ತನ್ನ ಬಾಡಿಗಾರ್ಡ್ ಗೆ 12ಕೋಟಿ ಹಣ ಕೊಟ್ಟಿದ್ದಳೆ. ಈ ಬಗ್ಗೆ ತಿಳಿದಿದ್ದ ಕೆಲಸಗಾರರಿಗೂ ಕೋಟಿಗಟ್ಟಲೇ ಹಣ ನೀಡಿದ್ದಾಳೆ ಎಂಬ ಮಾಹಿತಿ ಇದೆ.
ಅನೈತಿಕ ಸಂಬಂಧ ಹೊಂದಿದ್ದ ಪತ್ನಿಗೆ ರಾಜಕುಮಾರ 2019ರಲ್ಲೇ ಷರಿಯಾ ಕಾನೂನಿನ ಪ್ರಕಾರ ವಿಚ್ಛೇದನ ನೀಡಿದ್ದಾನೆ.
PublicNext
21/11/2020 07:59 pm