ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸ್ಯ ನಟಿ ಭಾರತಿ ಸಿಂಗ್ ಮನೆ ಮೇಲೆ ಎಸ್ ಸಿ ಬಿ ದಾಳಿ

ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಕಾಮಿಡಿಯನ್‌ ಭಾರತಿ ಸಿಂಗ್‌ ಮನೆ ಮೇಲೆ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಬೈನಲ್ಲಿರುವ ಅವರ ನಿವಾಸದ ಮೇಲೆ ಶನಿವಾರ (ನ.21) ದಾಳಿ ಮಾಡಿ ತನಿಖೆ ನಡೆಸಲಾಗುತ್ತಿದೆ. ಮಾದಕ ವಸ್ತು ಜಾಲವನ್ನು ಭೇದಿಸುತ್ತಿರುವ ಎನ್ ಸಿ ಬಿ ಅಧಿಕಾರಿಗಳು ಹಲವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

ಹಿಂದಿ ಕಿರುತೆರೆಯ ಹಲವು ಕಾಮಿಡಿ ಕಾರ್ಯಕ್ರಮಗಳಲ್ಲಿ ಭಾರತಿ ಸಿಂಗ್‌ ಕಾಣಿಸಿಕೊಂಡಿದ್ದಾರೆ. ತಮ್ಮ ಭಿನ್ನವಾದ ಮ್ಯಾನರಿಸಂನ ಕಾರಣದಿಂದ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಪ್ರಸ್ತುತ ಅವರು 'ದಿ ಕಪಿಲ್‌ ಶರ್ಮಾ ಶೋ'ನಲ್ಲಿ ಕಾಮಿಡಿಯನ್‌ ಆಗಿ ಜನರನ್ನು ರಂಜಿಸುತ್ತಿದ್ದಾರೆ. ಮಾದಕ ವಸ್ತು ಜಾಲದಲ್ಲಿ ಹಾಸ್ಯ ನಟಿ ಭಾರತಿ ಸಿಂಗ್ ಅವರ ಹೆಸರು ಕೇಳಿ ಬಂದಿದ್ದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನರಾದ ಬಳಿಕ ಹಿಂದಿ ಚಿತ್ರರಂಗದಲ್ಲಿ ಹರಡಿಕೊಂಡಿರುವ ಮಾದಕ ವಸ್ತು ಜಾಲ ಬೆಳಕಿಗೆ ಬಂತು. ಸಿನಿಮಾ ನಟ-ನಟಿಯರು, ತಂತ್ರಜ್ಞರು ಮಾತ್ರವಲ್ಲದೆ, ಹಿಂದಿ ಕಿರುತೆರೆಯ ಅನೇಕರು ಕೂಡ ಅದರಲ್ಲಿ ಭಾಗಿ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆ ಹಿನ್ನೆಲೆಯಲ್ಲಿ ಭಾರತಿ ಸಿಂಗ್‌ ಮನೆ ಮೇಲೆ ದಾಳಿ ಮಾಡಲಾಗಿದೆ.

Edited By : Nagaraj Tulugeri
PublicNext

PublicNext

21/11/2020 02:46 pm

Cinque Terre

61.24 K

Cinque Terre

1