ಹಾಸನ: ರಾತ್ರೋ ರಾತ್ರಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಅದೇ ಕೇಸಿಗೆ ಸಂಬಂಧಿಸಿದಂತೆ ಮತ್ತೊಂದು ಸಾವು ಸಂಭವಿಸಿದೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ರಾಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ 25 ವರ್ಷದ ಪೂಜಾ ಎಂಬಾಕೆಯನ್ನು ಆಕೆಯ ಗಂಡ ಗಂಗಾಧರ್ ಮಚ್ಚಿನಿಂದ ಕೊಲೆ ಮಾಡಿ ಪರಾರಿಯಾಗಿದ್ದ. ತನ್ನ ಮಗನಿಂದಲೇ ಸೊಸೆ ಕೊಲೆಯಾಗಿರುವ ಸುದ್ದಿ ಕೇಳುತ್ತಿದ್ದಂತೆ ಆಘಾತಗೊಂಡ ಗಂಗಾಧರ್ ತಾಯಿ ಜಯಮ್ಮ ವಿಷ ಸೇವಿಸಿದ್ದಳು. ಕೂಡಲೇ ಜಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.
ಹೆಂಡತಿ ಪೂಜಾಳ ಮೇಲೆ ಗಂಗಾಧರ್ ಅನುಮಾನಪಟ್ಟಿದ್ದ. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.
PublicNext
19/11/2020 10:26 pm