ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

6 ಕಿ.ಮೀ ಕಾರು ಹಿಂಬಾಲಿಸಿ ಬೆಂಗ್ಳೂರಿನಲ್ಲಿ ಉದ್ಯಮಿಯ ದರೋಡೆ

ಬೆಂಗಳೂರು: ಉದ್ಯಮಿಯೊಬ್ಬರ ಕಾರನ್ನು ಆರು ಕಿ.ಮೀ ಹಿಂಬಾಲಿಸಿದ ಗ್ಯಾಂಗ್ ಒಂದು 6 ಲಕ್ಷ ರೂ. ಮೌಲ್ಯದ ರೊಲ್ಯಾಕ್ಸ್ ವಾಚ್, 2.75 ಲಕ್ಷ ರೂ. ನಗದು ದರೋಡೆ ಮಾಡಿದ್ದಾರೆ.

ಕೇರಳ ಮೂಲದ ಉದ್ಯಮಿ ಸಮೀಲ್ ಎಂಬವರು ನವೆಂಬರ್‌ 11ರಂದು ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಐಸಿಐಸಿಐ ಬ್ಯಾಂಕ್‌ನಲ್ಲಿ ಹಣ ಜಮಾ ಮಾಡಲು ತೆರಳಿದ್ದರು. ಈ ವೇಳೆ ಬ್ಯಾಂಕ್ ಅವಧಿ ಮುಗಿದಿದ್ದರಿಂದ ಹಣವನ್ನು ವಾಪಸ್ ಕಾರಿನಲ್ಲಿಟ್ಟುಕೊಂಡು ಕಮ್ಮನಹಳ್ಳಿ ಕಡೆ ಬರುತ್ತಿದ್ದರು. ಬೈಕ್‌ನಲ್ಲಿ ಬಂದ ಆರು ಜನರ ತಂಡವು ಮಾರ್ಗಮಧ್ಯೆ ಸಮೀಲ್ ಅವರನ್ನು ಅಡ್ಡಗಟ್ಟಿದ್ದರು.

ಉದ್ಯಮಿ ಸಮೀಲ್ ಅವರಿಗೆ ಬೆದರಿಕೆ ಹಾಕಿದ್ದ ದುಷ್ಕರ್ಮಿಗಳು 6 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್, 2.75 ಲಕ್ಷ ರೂ. ನಗದು, ಎಟಿಎಂ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ದರೋಡೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Edited By : Vijay Kumar
PublicNext

PublicNext

19/11/2020 12:48 pm

Cinque Terre

68.51 K

Cinque Terre

0

ಸಂಬಂಧಿತ ಸುದ್ದಿ