ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಮ್ಮಟನಗರಿಯಲ್ಲಿ ಮತ್ತೆ ಕೇಳಿದ ಗುಂಡಿನ ಸದ್ದು- ಓರ್ವನಿಗೆ ಗಾಯ

ವಿಜಯಪುರ: ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಹಣಕಾಸಿನ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದು ಓರ್ವನ ಮೇಲೆ ಮತ್ತೋರ್ವ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

ನಗರದ ಜಿ.ಪಂ ಹತ್ತಿರ ಬುಧವಾರ ರಾತ್ರಿ ನಡೆದಿದೆ. ಬಾರಾಕೊಟ್ರಿ ತಾಂಡಾ ನಿವಾಸಿ ಪದ್ದು ರಾಠೋಡ್ ಮೇಲೆ ಗುಂಡಿನ ದಾಳಿ ಆಗಿದ್ದು, ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಂಡು ಹಾರಿಸಿದ ಆರೋಪಿ ತುಳಸಿರಾಮ್ ತಲೆಮರೆಸಿಕೊಂಡಿದ್ದು, ಆತನಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಅನುಪಮ ಅಗ್ರವಾಲ್, ಎಎಸ್‌ಪಿ ರಾಮ್ ಅರಸಿದ್ಧಿ ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

19/11/2020 07:46 am

Cinque Terre

78.61 K

Cinque Terre

0