ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಅಕ್ರಮ ಸಂಬಂಧಕ್ಕೆ ಅಡ್ಡಿ- ಪ್ರಿಯಕರ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ

ತುಮಕೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆಗೈದ ಘಟನೆ ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ನಡೆದಿದೆ.

ಮಾಯಸಂದ್ರದ ಮಂಜುನಾಥ (30) ಬಿನ್ ಮೂಡ್ಲಯ್ಯ ಕೊಲೆಯಾದ ಪತಿ. ಮಂಜುನಾಥನ ಪತ್ನಿ ವಿದ್ಯಾ (23) ಹಾಗೂ ಆಕೆಯ ಪ್ರಿಯಕರ ಯೋಗಿ (32) ಕೊಲೆಗೈದ ಆರೋಪಿಗಳು. ಇದೇ ನವೆಂಬರ್ 12ರಂದು ಘಟನೆ ನಡೆದಿತ್ತು. ಮಂಜುನಾಥನ ಸಾವಿನ ಬಗ್ಗೆ ಅನುಮಾನ ಹೊಂದಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದಂತೆ ಮಂಜುನಾಥನ ಸಾವು ಸಹಜವಾಗಿರಲಿಲ್ಲ. ಆತನದ್ದು ಕೊಲೆ ಎಂಬುದಕ್ಕೆ ಬಲವಾದ ಸುಳಿವು ಸಿಕ್ಕಿತ್ತು.

ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಪಿ.ನವೀನ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದರು. ಪ್ರಕರಣದಲ್ಲಿ ಮೃತನ ಪತ್ನಿ ವಿದ್ಯಾಳನ್ನು ವಿಚಾರಣೆಗೆ ಸತ್ಯ ಬೆಳಕಿಗೆ ಬಂದಿದೆ.

Edited By : Vijay Kumar
PublicNext

PublicNext

18/11/2020 09:01 am

Cinque Terre

75.08 K

Cinque Terre

7

ಸಂಬಂಧಿತ ಸುದ್ದಿ