ಹೈದರಾಬಾದ್: ಕಿಡ್ನಾಪ್ ಆಗಿದ್ದ 3 ವರ್ಷದ ಮಗುವನ್ನು ಹೈದರಾಬಾದ್ ಪೊಲೀಸರು ಕೇವಲ 20 ಗಂಟೆಯಲ್ಲೇ ಪತ್ತೆಹಚ್ಚಿದ್ದಾರೆ. ಪೊಲೀಸ್ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಹೈದರಾಬಾದ್ ನಗರದ ಪೂರ್ವ ವಲಯದ ಬಸ್ ನಿಲ್ದಾಣದಿಂದ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಆಕೆಯ ತಾಯಿ ನನ್ನ ಹೆಣ್ಣು ಮಗುವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆಂದು ನವೆಂಬರ್ 14ರಂದು ದೂರು ನೀಡಿದ್ದರು. ತಕ್ಷಣವೇ ಶೋಧಕಾರ್ಯ ನಡೆಸಿದ ಹೈದರಾಬಾದ್‌ನ ಅಫ್ಜಲ್‌ಗುಂಜ್ ಪೊಲೀಸರು ಮಗುವನ್ನು ಅಪಹರಿಸಿದ ಪ್ರದೇಶಗಳ ವಿವಿಧ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು 20 ಗಂಟೆಗಳಲ್ಲಿ ಮಗುವನ್ನು ರಕ್ಷಿಸಿದ್ದಾರೆ.
PublicNext
17/11/2020 02:35 pm