ಬೆಂಗಳೂರು: ಡ್ರಗ್ಸ್ ಪೆಡ್ಲರ್ಸ್ಗಳು ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ಗೆ ಮಾದಕ ವಸ್ತು ನೀಡಿ ಆತನಿಂದ ಲಾಭ ಪಡೆಯುತ್ತಿದ್ದರು ಎಂಬ ಸ್ಫೋಟಕ ಮಾಹಿತಿ ಸಿಕ್ಕಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ದರ್ಶನ್ ಲಮಾಣಿನನ್ನು ವಿಚಾರಣೆಗೆ ಒಳಪಡಿಸಿದ ಸಿಸಿಬಿ ಅಧಿಕಾರಿಗಳಿಗೆ ಈ ಮಾಹಿತಿ ಸಿಕ್ಕಿದೆ. ಆರೋಪಿಗಳು ದರ್ಶನ್‌ಗೆ ಮತ್ತೇರಿಸಿ ಡ್ರಗ್ಸ್ ದಂಧೆ, ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ರುದ್ರಪ್ಪ ಲಮಾಣಿ ಅವರು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಸಚಿವರಾಗಿದ್ದರಿಂದ ಆರೋಪಿಗಳು ದರ್ಶನ್ ಜೊತೆ ಸ್ನೇಹ ಮಾಡಿದ್ದರು. ಬೆಂಗಳೂರಿನ ದರ್ಶನ್ ಲಮಾಣಿಗೆ ಸೇರಿದ ಸಂಜಯನಗರದ ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ಮಿಡ್ ನೈಟ್ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸೇರಿದಂತೆ ಒಟ್ಟು 9 ಜನರನ್ನು ಬಂಧಿಸಲಾಗಿದೆ. 9 ಆರೋಪಿಗಳ ಪೈಕಿ ನಾಲ್ವರು ದರ್ಶನ್‌ಗೆ ಸ್ನೇಹಿತರಾಗಿದ್ದರು. ದರ್ಶನ್‌ಗೆ ಮತ್ತೇರಿಸಿ ವ್ಯವಹಾರಕ್ಕೆ ಬಳಸಿಕೊಳ್ತಿದ್ದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ.
PublicNext
16/11/2020 01:12 pm