ಬೆಂಗಳೂರು: ಹೊಸ ವರ್ಷದ ಪಾರ್ಟಿಗಳಲ್ಲಿ ಮಾರಲು ಡ್ರಗ್ಸ್ ದಾಸ್ತಾನು ಮಾಡಿದ್ದಕ್ಕಾಗಿ ಮೂರು ಡೆಲಿವರಿ ಬಾಯ್ಸ್‌ಗಳನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆಯುಷ್ ಪಾಂಡೆ (22) ಮತ್ತು ರೋಹಿತ್ ರಾಮ್ (22) ಕೊರಿಯರ್ ಸೇವೆಯ ಮೂಲಕ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಮತ್ತು ರಾಜಸ್ಥಾನ್‌ದಿಂದ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದರು. ಇದನ್ನು ಟೆಡ್ಡಿ ಬೇರ್ಸ್, ಮೆಡಿಕಲ್ ಕಿಟ್‌ಗಳಲ್ಲಿ ಪ್ಯಾಕ್ ಮಾಡಿ ಸಾಗಿಸಲಾಗುತ್ತಿತ್ತು. ನಂತರ ನೂರ್ ಅಲಿ (30) ಅವುಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
PublicNext
15/11/2020 07:57 pm