ಹೈದರಾಬಾದ್: ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಹೋಗಿದ್ದ ನಾಲ್ವರು ಗೋದಾವರಿ ನದಿಯಲ್ಲಿ ಕೊಚ್ಚಿ ಹೋದ ಘಟನೆ ತೆಲಂಗಾಣದ ಮುಲುಗಿನ ಸಮೀಪದಲ್ಲಿ ನಡೆದಿದೆ.
ಸ್ನೇಹಿತರ ಜನ್ಮದಿನವನ್ನು ಆಚರಿಸಲು 16 ಜನ ಯುವಕರ ಗುಂಪು ಶನಿವಾರ ಮುಲುಗಿನ ಸಮೀಪದ ಗೋದಾವರಿ ನದಿ ತೀರಕ್ಕೆ ಹೋಗಿತ್ತು. ಪಾರ್ಟಿ ಸಮಯದಲ್ಲಿ ಈಜುವುದಕ್ಕಾಗಿ ನಾಲ್ವರು ಯುವಕರು ಆಳವನ್ನು ತಿಳಿಯದೆ ನದಿಗೆ ಇಳಿದಿದ್ದರು. ಆದರೆ ಈಜು ಬಾರದೆ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
15/11/2020 06:03 pm