ಕೋಲಾರ: ಪಾಪಿ ಪತಿಯೊಬ್ಬ ಹಬ್ಬದ ದಿನವೇ ಬಾಣಂತಿ ಪತ್ನಿಯನ್ನ ಕೊಲೆಗೈದ ಅಮಾನೀಯ ಘಟನೆ ಕೆಜಿಎಫ್ ತಾಲೂಕಿನ ಪಂತನಹಳ್ಳಿಯಲ್ಲಿ ನಡೆದಿದೆ.
ಪಂತನಹಳ್ಳಿಯ ಗಣೇಶ್ ಕೊಲೆಗೈದ ಪತಿ. 20 ವರ್ಷದ ನಂದಿನಿ ಕೊಲೆಯಾದ ಪತ್ನಿ. ನಂದಿನಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಆರೋಪಿ ಗಣೇಶ್ ಪತ್ನಿಯ ನಡುವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ. ಈ ಕಾರಣಕ್ಕೆ ಪತ್ನಿಯ ಕತ್ತು ಕೊಯ್ದು ಹತ್ಯೆಗೈದಿದ್ದಾನೆ.
ಪೊಲೀಸರು ನಂದಿನಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಆರೋಪಿ ಗಣೇಶ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
15/11/2020 04:33 pm