ಥಾಣೆ: ನಿಯತ್ತಿಗೆ ಹೆಸರಾದ ಪ್ರಾಣಿ ಎಂದರೆ ಎಲ್ಲರೂ ಹೇಳೋದು ನಾಯಿ ಎಂದು.
ನಾಯಿಗಿಂತ ನಿಯತ್ತಾದ ಪ್ರಾಣಿ ಮತ್ತೊಂದಿಲ್ಲ ಬಿಡಿ ಆದ್ರೆ ಅಂತಹ ನಾಯಿಗೆ ದಂಪತಿಯೊಬ್ಬರು ಮಾಡಿದ ಕಾರ್ಯ ನೋಡಿದ್ರೆ ಎಂಥವರಿಗೂ ಸಿಟ್ಟು ಬರಲಾರದೇ ಇರಲಾರದು.
ಸುಮ್ಮನೆ ಮಲಗಿದ್ದ ನಾಯಿ ಮೇಲೆ ಆ್ಯಸಿಡ್ ದಾಳಿ ಮಾಡುವ ಕ್ರೂರ ಬುದ್ಧಿಯೂ ಮನುಷ್ಯರಲ್ಲಿದೆ ಅಂದರೆ ನೀವು ನಂಬಲೇ ಬೇಕು.
ಇಂತದ್ದೊಂದು ಘಟನೆ ನಡೆದಿರುವುದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಅಲ್ಲಿನ ಬೀದಿ ನಾಯಿಯೊಂದು ಪ್ರತಿದಿನ ಕಯೂಮ್ ಖಾನ್ ಮತ್ತು ಅಫ್ರೀನ್ ದಂಪತಿಯ ಮನೆ ಬಳಿ ಮಲಗುತ್ತಿತ್ತಂತೆ.
ಈ ರೀತಿ ನಾಯಿ ಮಲಗುವುದನ್ನು ಸಹಿಸಲಾಗದ ದಂಪತಿ ನಾಯಿ ಮೇಲೆ ಆ್ಯಸಿಡ್ ಸುರಿದಿದ್ದಾರೆ.
ಇದರಿಂದಾಗಿ ನಾಯಿ ಮುಂದಿನ ಎರಡು ಕಾಲು ಮತ್ತು ಕಿವಿಗಳನ್ನು ಕಳೆದುಕೊಂಡಿದೆ.
ನಾಯಿಯ ಮೇಲೆ ಆ್ಯಸಿಡ್ ದಾಳಿ ಮಾಡಿರುವ ದಂಪತಿಯ ಮೇಲೆ ದಂಡ ಸಂಹಿತೆ (ಐಪಿಸಿ)ಯ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ಪಿಸಿಎ) ಕಾಯ್ದೆ 1960 ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆ 1951ರ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.
ಗಾಯಗೊಂಡಿದ್ದ ನಾಯಿಯನ್ನು ಸ್ಥಳೀಯ ಸಂಘಟನೆಯೊಂದು ಗುರುತಿಸಿ, ಪ್ರಾಣಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದೆ.
PublicNext
12/11/2020 07:10 pm