ಲಂಡನ್: ಎಂಟು ನವಜಾತ ಶಿಶುಗಳ ಹತ್ಯೆ ಹಾಗೂ ಸುಮಾರು 10 ಮಕ್ಕಳ ಕೊಲೆಗೆ ಪ್ರಯತ್ನಿಸಿದ್ದ ಆರೋಪಿ ಮಕ್ಕಳ ನರ್ಸ್ ಅನ್ನು ಇಂಗ್ಲೆಂಡ್ ಪೊಲೀರು ಬಂಧಿಸಿದ್ದಾರೆ.
ಇಂಗ್ಲೆಂಡ್‌ನ ಚೆಷೈರ್ ನಿವಾಸಿ ಲೂಸಿ ಲೆಟ್ಬಿ (30) ಮಕ್ಕಳನ್ನು ಕೊಲೆಗೈದ ನರ್ಸ್. ಲೂಸಿ ಲೆಟ್ಬಿ ಇಂಗ್ಲೆಂಡ್‌ನ ಚೆಷೈರ್ನಲ್ಲಿರುವ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ 2015 ಮತ್ತು 2016ರ ನಡುವೆ ಈ ಸರಣಿ ಹತ್ಯೆ ನಡೆಸಿದ್ದಳು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು 2018ರಲ್ಲಿ ಮೊದಲ ಬಾರಿಗೆ ಲೂಸಿಯನ್ನು ವಶಕ್ಕೆ ಪಡೆದಿದ್ದರು. ಆದರೆ ಆರೋಪಿಯು ಜಾಮೀನಿನ ಮೂಲಕ ಹೊರಬಂದಿದ್ದಳು.
ಸದ್ಯ ತನಿಖೆಯನ್ನು ತೀವ್ರಗೊಳಿಸಿರುವ ಚೆಷೈರ್ ಪೊಲೀಸರು, ಮಕ್ಕಳ ಸರಣಿ ಕೊಲೆಗೆ ಸಂಬಂಧಿಸಿದ ತನಿಖಾ ವೇಳೆ ನರ್ಸ್ ಲೂಸಿ ಪಾತ್ರವಿರುವುದು ತಿಳಿದುಬಂದಿದೆ ಎಂದು ತಿಳಿಸಿದೆ. ಆದರೆ ಈ ಆರೋಪವನ್ನು ಲೂಸಿ ಪೋಷಕರು, ಸ್ನೇಹಿತರು ಹಾಗೂ ಆಸ್ಪತ್ರೆಯ ಸಿಬ್ಬಂದಿ ಅಲ್ಲಗಳೆದಿದ್ದಾರೆ.
PublicNext
12/11/2020 05:26 pm