ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಡುಗಿಯ ಮುಂದೆ ಪ್ಯಾಂಟ್ ಬಿಚ್ಚುತ್ತಿದ್ದ ಯುವಕನ ಮೈ ಚಳಿ ಬಿಡಿಸಿದ ಯುವತಿ

ಬೆಂಗಳೂರು: ಕೆಲವರ ವರ್ತನೆ ಬೇರೆಯವರಿಗೆ ಎಷ್ಟರ ಮಟ್ಟಿಗೆ ಕಿರಿಕಿರಿ ಮಾಡುತ್ತದೆ ಅಂದ್ರೆ ಅದನ್ನಾ ಕೆಲವೊಮ್ಮೆ ಮತ್ತೊಬ್ಬರ ಮುಂದೆ ಹೇಳಲು ಕೂಡಾ ಸಾಧ್ಯವಾಗುವುದಿಲ್ಲ.

ಸದ್ಯ ಇಲ್ಲೊಂದು ಘಟನೆ ಅದೇ ರೀತಿ ನಡೆದಿದೆ ಅದಕ್ಕೆ ಯುವತಿಯೋರ್ವಳು ಸರಿಯಾಗಿಯೇ ಶಾಸ್ತಿ ಮಾಡಿದ್ದಾಳೆ.

ಹೌದು ಮನೆಯ ಟೆರೇಸ್ ಮೇಲೆ ನಿಂತು ಯುವತಿಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಧೈರ್ಯವಾಗಿ ದೂರು ನೀಡಿ ಯುವತಿ ಆರೋಪಿಗೆ ಬುದ್ಧಿ ಕಲಿಸಿರುವ ಘಟನೆ ನಗರದ ಕೋರಮಂಗಲದಲ್ಲಿ ನಡೆದಿದೆ.

ನಗರದ ಕೋರಮಂಗಲ ನಿವಾಸಿಯಾಗಿರುವ ನೂಪುರ್ ಸಾರಸ್ವತ್ ಅವರು ನವೆಂಬರ್ 8 ರಂದು ಸಾಮಾಜಿಕ ಜಾಲತಾಣ ಇನ್ ಸ್ಟಾದಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡಿದ್ದರು.

ಆತನ ಫೋಟೋಗಳನ್ನು ಇನ್ ಸ್ಟಾದಲ್ಲಿ ಹಂಚಿಕೊಂಡಿದ್ದ ಅವರು, ಘಟನೆಯ ಕುರಿತು ಮಾಹಿತಿ ನೀಡಿ ಪೋಸ್ಟ್ ಮಾಡಿದ್ದರು.

ನೂಪುರ್ ಅವರು ಒಂದು ತಿಂಗಳ ಹಿಂದೆಯಷ್ಟೇ ಕೋರಮಂಗಲದ ಅಪಾರ್ಟ್ ಮೆಂಟ್ ಒಂದಕ್ಕೆ ವಾಸಸ್ಥಳವನ್ನು ಬದಲಿಸಿದ್ದರು.

ಹೀಗೆ ಒಮ್ಮೆ ಇವರು ಮನೆಯಲ್ಲಿದ್ದ ಸಂದರ್ಭದಲ್ಲಿ ಅಪಾರ್ಟ್ ಮೆಂಟ್ ಪಕ್ಕದ ಬಿಲ್ಡಿಂಗ್ ನಲ್ಲಿದ್ದ ಯುವಕ ಟೆರೇಸ್ ಮೇಲೆ ನಿಂತು ಸುಮಾರು 1 ಗಂಟೆಗೂ ಹೆಚ್ಚು ಇವರನ್ನೇ ನೋಡುತ್ತಾ ನಿಂತಿದ್ದ.

ಇವರು ವಾಸಿಸುತ್ತಿದ್ದ ನಿವಾಸದ ಕಿಟಕಿಯಿಂದ ಆತ ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಈ ಕುರಿತು ಮಾಹಿತಿ ನೀಡಿ ಪೋಸ್ಟ್ ಮಾಡಿರುವ ನೂಪುರ್, ಆತನ ವರ್ತನೆ ನನಗೆ ಮುಜುಗರವನ್ನು ಉಂಟು ಮಾಡಿತ್ತು.

ಈ ವರ್ತನೆ ನನಗೆ ಕಿರಿಕಿರಿಯಾಗುತ್ತಿದ್ದಂತೆ ನಾನು ಆತನಿಗೆ ಬೈದು ಕೂಗಾಡಿದ್ದೆ. ಕೂಡಲೇ ಆತ ತನ್ನ ಪ್ಯಾಂಟ್ ಬಿಚ್ಚಿ ನನ್ನ ಕಡೆ ಅಸಹ್ಯವಾಗಿ ನಗು ಬೀರಿದ್ದ.

ನಾನು ಫೋಟೋ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿ ಕ್ಯಾಮೆರಾ ತೆಗೆದುಕೊಂಡೆ. ಆ ವೇಳೆಗೆ ಆತ ಪ್ಯಾಂಟ್ ಹಾಕಿಕೊಂಡು ಅಲ್ಲಿಯೇ ನನ್ನನ್ನು ನೋಡುತ್ತಾ ನಿಂತಿದ್ದ ಎಂದು ಬರೆದುಕೊಂಡಿದ್ದಾರೆ.

ಯುವನಿಗೆ ಬುದ್ಧಿ ಕಲಿಸಲು ಮುಂದಾದ ನೂಪುರ್ ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದರು. ಆದರೆ ಮಾಲೀಕರು ನೂಪುರ್ ಅವರಿಗೆ ಕರುಣೆಯಿಂದ ನೋಡಿ ಪೊಲೀಸರಿಗೆ ದೂರು ನೀಡಲು ಸಲಹೆ ನೀಡಿದ್ದರು.

ಇತ್ತ ಆತನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದ ನೂಪುರ್, ತನಗಾದ ಆಘಾತಕಾರಿ ಅನುಭವವನ್ನು ಫೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಕೀಲರು, ಮಹಿಳಾ ಸಹಾಯವಾಣಿ ಹಾಗೂ ಸ್ನೇಹಿತ ನೆರವು ಕೋರಿದ್ದರು.

ಈ ವೇಳೆ ಕೆಲವರು ಯುವಕನ ವರ್ತನೆಯನ್ನು ಖಂಡಿಸಿದ್ದ ಹಲವರು ಆತನ ಕೃತ್ಯ ಶಿಕ್ಷಾರ್ಹ ಅಪರಾಧ ಎಂದು ಕಾಮೆಂಟ್ ಮಾಡಿದ್ದರು.

ನವೆಂಬರ್ 9 ರಂದು ಕೋರಮಂಗಲ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಗುರುತಿಸಿ ಬಂಧಿಸಿದ್ದರು. ಪೊಲೀಸ್ ಠಾಣೆಗೆ ತೆರಳಿದ್ದ ನೂಪುರ್ ಅವರು ಆರೋಪಿಯ ವಿರುದ್ಧ ದೂರು ಕೂಡ ದಾಖಲಿಸಿದ್ದರು.

ನೂಪುರ್ ದಿಟ್ಟ ತನವನ್ನು ತಿಳಿದು ಸ್ಥಳೀಯ ನಿವಾಸಿಗಳು ಅವರಿಗೆ ಪ್ರಶಂಸೆಗಳನ್ನು ವ್ಯಕ್ತಪಡಿಸಿದ್ದಾರೆ.

Edited By : Nirmala Aralikatti
PublicNext

PublicNext

12/11/2020 04:33 pm

Cinque Terre

81.05 K

Cinque Terre

5

ಸಂಬಂಧಿತ ಸುದ್ದಿ