ಬೆಳಗಾವಿ: ಮೊಬೈಲ್‌ನಲ್ಲಿ ವಿಡಿಯೋ ಗೇಮ್ ಆಡಬೇಡ ಎಂದು ಪತ್ನಿ ಹೇಳಿದ್ದಕ್ಕೆ ಬೇಸಗೊಂಡ ಪತಿಯೊಬ್ಬ ಬೆಳಗಾವಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಚಿಕ್ಕಮಗಳೂರು ಚರ್ಚ್ ರಸ್ತೆಯ ನಿವಾಸಿ ಶಹಾಬ್ ಸಿ.ಎಂ. (36) ಆತ್ಮಹತ್ಯೆಗೆ ಶರಣಾದ ಪತಿ. ಬೆಳಗಾವಿಯ ಖಡೇಬಜಾರ್ ರಸ್ತೆಯಲ್ಲಿರುವ ಲಾಡ್ಜ್ ನ ಕೊಠಡಿಯ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಎಎಸ್‌ಐ ಎ.ಎಂ.ಯರಗಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
12/11/2020 02:55 pm