ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಲಸೂತ್ರವನ್ನು ನಾಯಿ ಚೈನಿಗೆ ಹೋಲಿಸಿದ ಲೇಡಿ ಪ್ರೊಫೆಸರ್

ಪಣಜಿ:ಮಹಿಳಾ ಪ್ರೊಫೆಸರ್ ಒಬ್ಬರು ಮಹಿಳೆಯರ ಮಂಗಳಸೂತ್ರವನ್ನು ನಾಯಿ ಚೈನಿಗೆ ಹೋಲಿಕೆ ಮಾಡಿದ್ದಾರೆ. ಈ ಘಟನೆ ಗೋವಾದಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಇಂತಹ ಪೋಸ್ಟ್ ಹಾಕಿದ ಮಹಿಳೆ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.

ಶಿಲ್ಪಾ ಸಿಂಗ್ ಎಂಬುವವರೇ ವಿವಾದಕ್ಕೀಡಾದ ಪ್ರೊಫೆಸರ್ ಆಗಿದ್ದಾರೆ. ಸದ್ಯ ಇವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ರಾಷ್ಟ್ರೀಯ ಹಿಂದೂ ಯುವ ವಾಹಿನಿ ಗೋವಾ ಘಟಕದ ರಾಜೀವ್ ಝಾ ಎಂಬವರು ಪ್ರೊಫೆಸರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪ್ರೊಫೆಸರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಝಾ ಅವರು ತಮ್ಮ ದೂರಿನಲ್ಲಿ ಸಿಂಗ್ ಅವರ ಫೇಸ್ ಬುಕ್ ಪೋಸ್ಟ್ ಅನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರು ಹಿಂದೂ ಧರ್ಮ ಹಾಗೂ ಇಸ್ಲಾಂ ಧರ್ಮದ ಸಂಪ್ರದಾಯಗಳನ್ನು ಟೀಕಿಸಿದ್ದರು. ಕ್ರಮವಾಗಿ ಮಂಗಳಸೂತ್ರವನ್ನು ಧರಿಸುವ ಮತ್ತು ಬುರ್ಖಾ ಧರಿಸುವ ಅಭ್ಯಾಸವನ್ನು ಸಹಿತ ಉಲ್ಲೇಖಿಸಿದ್ದಾರೆ. ಮತ್ತು ಮಹಿಳೆಯರು ಧರಿಸುವ ಮಂಗಳಸೂತ್ರವನ್ನು ನಾಯಿ ಚೈನಿಗೆ ಹೋಲಿಕೆ ಮಾಡಿದ್ದಾರೆ. ಸದ್ಯ ಇವರ ಪೋಸ್ಟ್ ಗೆ ಎಲ್ಲೆಡೆಯಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Edited By : Nagaraj Tulugeri
PublicNext

PublicNext

11/11/2020 03:28 pm

Cinque Terre

105.31 K

Cinque Terre

28