ರಾಯಚೂರು : ಪ್ರೇಮ ಪಕ್ಷಿಗಳನ್ನು ದೂರ ಮಾಡಲು ಮುಂದಾದ ಪಾಲಕರು ಇಂದು ಮಗಳನ್ನೇ ಕಳೆದುಕೊಂಡಿದ್ದಾರೆ.
ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ವಿಷ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಮಲ್ಲಟ ಗ್ರಾಮದ ಮಹೇಶ (21) ಹಾಗೂ ಅಕ್ಷತಾ (18) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.
ಹುಡುಗಿಯ ಮನೆಯಲ್ಲಿ ಬೇರೆ ಯುವಕನ ಜತೆ ಮದುವೆ ನಿಶ್ಚಯ ಮಾಡಿದ್ದರಿಂದ ನೊಂದ ಪ್ರೇಮಿಗಳು ಗ್ರಾಮದ ಹೊರವಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಪಿಎಸ್ಐ ಸುಜಾತ ನಾಯಕ ಭೇಟಿ ನೀಡಿದ್ದು, ಈ ಕುರಿತು ಸಿರವಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
11/11/2020 03:24 pm