ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓದಲಾರದೇ ಬದುಕಲಾರೆ: ಡೆಟ್ ನೋಟ್ ಬರೆದು ಆತ್ಮಹತ್ಯೆ

ಹೈದರಾಬಾದ್- ಪಿಯುಸಿಯಲ್ಲಿ 98.5% ಅಂಕ ತೆಗೆದರೂ ಸ್ಕಾಲರ್ ಶಿಪ್ ಸಿಕ್ಕಿಲ್ಲ‌. ಲಾಕ್ ಡೌನ್ ಪರಿಣಾಮವಾಗಿ ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ‌. ಲ್ಯಾಪ್ ಟಾಪ್ ಇಲ್ಲದ್ದಕ್ಕೆ ಆನ್ಲೈನ್ ಕ್ಲಾಸ್ ಹಾಜರಾಗಲು ಆಗುತ್ತಿಲ್ಲ. ಓದಲಾರದೇ ನಾ ಬದುಕಲಾರೆ, ಅಪ್ಪ-ಅಮ್ಮ ಕ್ಷಮಿಸಿ ಎಂದು ಡೆತ್ ನೋಟ್ ಬರೆದಿಟ್ಟು 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಧ್ ನಗರದಲ್ಲಿ ನಡೆದಿದೆ.‌

ಐಎಎಸ್ ಓದಬೇಕೆಂಬ ಕನಸು ಕಂಡಿದ್ದ ಐಶ್ವರ್ಯಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿ. ಬಡತನವೇ ನನ್ನ ಆತ್ಮಹತ್ಯೆಗೆ ಕಾರಣವೆಂದು ಡೆತ್ ನೋಟ್ ನಲ್ಲಿ ಪರೋಕ್ಷವಾಗಿ ಹೇಳಿದ್ದಾಳೆ‌. ನನ್ನ ಕುಟುಂಬದ ಬಡತನಕ್ಕೆ ನಾನೇ ಕಾರಣ ಎಂದು ನನಗನಿಸುತ್ತಿದೆ‌. ಬಡತನ ಕಾರಣದಿಂದ ನನಗೆ ಓದಲಾಗುತ್ತಿಲ್ಲ. ಓದಲಾಗದೇ ನಾನು ಬದುಕಲಾರೆ. ಹೀಗಾಗಿ ಸಾವಿಗೆ ಶರಣಾಗುತ್ತಿದ್ದೇನೆ ಎಂದು ಐಶ್ವರ್ಯಾ ಡೆತ್ ನೋಟ್ ನಲ್ಲಿ ಬರೆದಿದ್ದಾಳೆ.

Edited By : Nagaraj Tulugeri
PublicNext

PublicNext

10/11/2020 08:20 am

Cinque Terre

51.52 K

Cinque Terre

7

ಸಂಬಂಧಿತ ಸುದ್ದಿ